Friday, March 14, 2025

Latest Posts

ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆ

- Advertisement -

www.karnatakatv.net: ರಾಜ್ಯ: ಬಳ್ಳಾರಿ- ಮನೆಯ ಮುಂಭಾಗದಲ್ಲಿರುವ ವಾಟರ್ ಟ್ಯಾಂಕಿನಲ್ಲಿ ತನ್ನ ಎರಡು ಮಕ್ಕಳನ್ನ ಮುಳುಗಿಸಿ ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಘಟನೆ ಬಳ್ಳಾರಿಯ ಇಂದಿರಾ ನಗರದಲ್ಲಿ ನಡೆದಿದೆ. ಸಿದ್ಧಪ್ಪ ಎಂಬುವರ ಪತ್ನಿ ಸುನೀತಾ(25), ಮಕ್ಕಳಾದ ಯಶ್ವಂತ(4) ಹಾಗೂ ಸಾನ್ವಿ(3) ಮೃತ ದುರ್ದೈವಿಗಳು. ಕ್ಷುಲ್ಲಕ ಕಾರಣಕ್ಕೆ ಗಂಡ-ಹೆಂಡತಿಯ ನಡುವೆ ಜಗಳ ನಡೆಯುತ್ತಿತ್ತು ಎಂಬ ಮಾಹಿತಿ ದೊರೆತಿದೆ. ಇದರಿಂದ ಮನನೊಂದ ಸುನೀತಾ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ. ಈ ಸಂಬಂಧ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -

Latest Posts

Don't Miss