www.karnatakatv.net: ಸಿನಿಮಾ: ಬೆಂಗಳೂರು- ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ 31ನೇ ಚಿತ್ರದ ಟೈಟಲ್ ಲಾಂಚ್ ಆಗಿದೆ. ಇದರೊಂದಿಗೆ ಚಿತ್ರ ತಂಡವು ಫಸ್ಟ್ ಲುಕ್ ಕೂಡಾ ಬಿಡುಗಡೆ ಮಾಡಿದೆ. ಪುನೀತ್ ಅಭಿನಯದ ಹೊಸ ಚಿತ್ರದ ಹೆಸರು ‘ದ್ವಿತ್ವ’ ಈಗ ಹೆಚ್ಚು ಸದ್ದು ಮಾಡ್ತಿದೆ. ಚಿತ್ರದ ಫಸ್ಟ್ ಲುಕ್ ಹೊರ ಬೀಳುತ್ತಿದ್ದಂತೆ ಟೈಟಲ್ ಬಗೆಗಿನ ಕುತೂಹಲ ಸಿನಿ ರಸಿಕರಲ್ಲಿ ಮನೆ ಮಾಡಿದೆ. ದ್ವಿತ್ವ ಅಂದ್ರೆ, ಎರಡು ಎಂದರ್ಥ… ದ್ವಿಪಾತ್ರದಲ್ಲಿಯೇ ಪುನೀತ್ ಕಾಣಿಸಿಕೊಳ್ಳುವಂತೆ ಕಥೆ ಹೆಣೆಯಲಾಗಿದೆ ಎಂಬ ಚರ್ಚೆಗಳು ಚಂದನವನದಲ್ಲಿ ಕೇಳಿ ಬರ್ತಿದೆ. ಸೈಕಲಾಜಿಕಲ್ ಥ್ರಿಲ್ ಕಥೆಯನ್ನ ದ್ವಿತ್ವ ಚಿತ್ರ ಹೊಂದಿದೆ. ಈ ಹಿಂದೆ ಲೂಸಿಯಾ ಮತ್ತು ಯೂಟರ್ನ್ ಚಿತ್ರಗಳನ್ನ ನೀಡಿದ ಪವನ್ ಕುಮಾರ್ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಇನ್ನು, ಹೊಂಬಾಳೆ ಫಿಲಿಂಸ್ ಚಿತ್ರ ನಿರ್ಮಾಣ ಮಾಡುತ್ತಿದೆ. ಛಾಯಾಗ್ರಹಣ ಪ್ರೀತಾ ಜಯರಾಮನ್ ಮತ್ತು ಪೂರ್ಣಚಂದ್ರ ತೇಜಸ್ವಿ ಸಂಗೀತ ಮಾಡುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ದ್ವಿತ್ವ ಚಿತ್ರದ ಚಿತ್ರೀಕರಣ ಸೆಟ್ಟೇರಲಿದೆ.