www.karnatakatv.netಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಹಾಗೂ ಪತ್ನಿ ಕಿರಣ್ ರಾವ್ ತಮ್ಮ ಸುಂದರ ದಾಂಪತ್ಯ ಜೀವನಕ್ಕೆ ಎಳ್ಳುನೀರು ಬಿಡೋದಕ್ಕೆ ಮುಂದಾಗಿದ್ದಾರೆ. ಹದಿನೈದು ವರ್ಷಗಳ ಮದುವೆ ಬಂಧನದಿಂದ ಮುಕ್ತಿ ಪಡೆಯೋದಕ್ಕೆ ನಿರ್ಧರಿಸುವ ಅಮೀರ್ ಹಾಗೂ ಕಿರಣ್, ಪರಸ್ಪರ ಒಪ್ಪಿಗೆಯ ಮೇರೆಗೆ ಈ ತೀರ್ಮಾನಕ್ಕೆ ಬಂದಿರುವುದಾಗಿ ಹೇಳಿಕೊಂಡು ಪತ್ರಿಕಾ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದ್ದಾರೆ.
ಪತ್ರಿಕಾ ಹೇಳಿಕೆ
ಈ ಹದಿನೈದು ವರ್ಷಗಳಲ್ಲಿ ಒಂದಿಡೀ ಜೀವನಮಾನಕಾಗುವಷ್ಟು ಸುಂದರ ಕ್ಷಣಗಳನ್ನು ಖುಷಿಯಿಂದ ಸಂತೋಷ ದಿಂದ ಆನಂದಿಂದ ಒಟ್ಟಿಗೆ ಕಳೆದಿದ್ದೇವೆ. ನಮ್ಮಿಬ್ಬರ ಸಂಬಂಧ ಪ್ರೀತಿ-ಗೌರವ ಹಾಗೂ ನಂಬಿಕೆಯ ಆಧಾರದ ಮೇಲೆ ಗಟ್ಟಿಯಾಗಿ ನಿಂತಿತ್ತು. ಇದೀಗ ನಾವಿಬ್ಬರು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಶುರುಮಾಡುವುದಕ್ಕೆ ನಿರ್ಧರಿಸಿದ್ದೇವೆ. ಆದರೆ, ಇನ್ಮುಂದೆ ನಾವು ಪತಿ-ಪತ್ನಿಯಾಗಿರುವುದಿಲ್ಲ, ಬದಲಾಗಿ ನಮ್ಮ ಮಗನಿಗೆ ಸಹಪೋಷಕರಾಗಿ, ಒಬ್ಬರಿಗೊಬ್ಬರು ಕುಟುಂಬವಾಗಿ ಮುಂದುವರೆಯುತ್ತೇವೆ. ನಾವಿಬ್ಬರು ಬೇರೆಬೇರೆಯಾಗುವ ಬಗ್ಗೆ ಕೆಲವು ಸಮಯದಿಂದೆನೇ ಯೋಚನೆ ಮಾಡಿದ್ದೆವು. ಈಗ ಸೂಕ್ತ ಸಮಯ ಬಂದಿದೆ. ಪರಸ್ಪರ ಒಪ್ಪಿಗೆಯ ಮೇರೆಗೆ ಪ್ರತ್ಯೇಕವಾಗುತ್ತಿದ್ದು, ವಿಚ್ಛೇದನದ ನಂತರವೂ ಒಬ್ಬರಿಗೊಬ್ಬರು ವಿಸ್ತರಿಸಿದ ಕುಟುಂಬವಾಗಿ ಮುಂದುವರೆಯಲಿದ್ದೇವೆ. ನಮ್ಮ ಪುತ್ರ ಅಜಾದ್‌ಗೆ ಪೋಷಕರಾಗಿಯೇ ಉಳಿದು ಜೊತೆಯಾಗಿ ಪೋಷಿಸಿ ಬೆಳೆಸಲಿದ್ದೇವೆ. ಸಿನಿಮಾಗಳಲ್ಲಿ, ಪಾನಿ ಫೌಂಡೇಶನ್‌ನಲ್ಲಿ. ಇತರೆ ಪ್ರಾಜೆಕ್ಟ್ ಗಳಲ್ಲಿ ಜೊತೆಯಾಗಿ ಕೆಲಸ ಮಾಡಲಿದ್ದೇವೆ. ನಮ್ಮ ಸಂಬಂಧದ ಈ ಬೆಳವಣಿಗೆಯನ್ನು ಅರ್ಥ ಮಾಡಿಕೊಂಡು ನಮಗೆ ಬೆಂಬಲ ನೀಡಿದ ಕುಟುಂಬ ವರ್ಗದವರಿಗೆ, ಸ್ನೇಹಿತರಿಗೆ ಧನ್ಯವಾದಗಳು. ನಮ್ಮ ಹಿತೈಶಿಗಳು ನಮಗೆ ಆಶೀರ್ವಾದ ನೀಡಬೇಕು ಎಂದು ಮನವಿ ಮಾಡುತ್ತೇವೆ. ಈ ವಿಚ್ಚೇಧನ ಅಂತ್ಯವಲ್ಲ ಬದಲಿಗೆ ಆರಂಭ ಎಂದು ಭಾವಿಸಿದ್ದೇವೆ ಎಂದಿದ್ದಾರೆ ಆಮೀರ್- ಕಿರಣ್
ಪ್ರೀತಿಸಿ ಮದುವೆಯಾಗಿದ್ದರು ಅಮೀರ್-ಕಿರಣ್
ಅಂದ್ಹಾಗೇ, ಅಮೀರ್ ಹಾಗೂ ಕಿರಣ್‌ರಾವ್ ಅವರದ್ದು ಲವ್ ಮ್ಯಾರೇಜ್. ಲಗಾನ್ ಸಿನಿಮಾದ ಸೆಟ್‌ನಲ್ಲಿ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಈ ಪ್ರೀತಿಗೆ ಡಿಸೆಂಬರ್ 28 2005 ರಂದು ಮದುವೆಯ ಮುದ್ರೆಯನ್ನ ಹೊತ್ತಿದ್ದರು. ಇವರಿಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಪುತ್ರ ಅಜಾದ್ ಜನಿಸಿದ್ದಾನೆ. ಅವನನ್ನು ಪೋಷಿಸಿ ಬೆಳೆಸುವುದಕ್ಕೆ ಅಮೀರ್-ಕಿರಣ್ ಇಬ್ಬರು ಪೋಷಕರಾಗಿ ಜೊತೆಯಾಗರ‍್ತೇವೆ ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಅಂದ್ಹಾಗೇ, ಅಮೀರ್, ಕಿರಣ್‌ರಾವ್‌ನ ಕೈ ಹಿಡಿಯೋದಕ್ಕೆ ಮೊದಲು ರೀನಾದತ್ತರನ್ನ ವರಿಸಿದ್ದರು. ಇವರೊಟ್ಟಿಗೆ ಹದಿನಾರು ವರ್ಷಗಳ ಕಾಲ ಸುಖಸಂಸಾರ ಮಾಡಿದ್ದರು. ಕೊನೆಗೆ ರೀನಾಗೆ ವಿಚ್ಛೇದನ ಕೊಟ್ಟು ಕಿರಣ್ ರಾವ್‌ರನ್ನ ಅಮೀರ್ ಕೈಹಿಡಿದರು. ಇದೀಗ ಕಿರಣ್ ಜೊತೆಗಿನ ಮದುವೆಯ ಬಂಧಕ್ಕೂ ಬ್ರೇಕ್ ಹಾಕಿದ್ದಾರೆ. ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರು ದೂರವಾಗ್ತಿದ್ದಾರೆ.