Saturday, July 12, 2025

Latest Posts

ಮಂಕಾಯಿತಾ ಡಿವಿಎಸ್ ರಾಜಕೀಯ ಹಾದಿ?!

- Advertisement -

www.karnatakatv.net: ಬೆಂಗಳೂರು: ಡಿವಿ ಸದಾನಂದ ಗೌಡರು ತಮ್ಮ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ತಿಳಿದಿರುವ ಸಂಗತಿ. ಇದರ ಸುತ್ತ ಹಲವು ಊಹಾ-ಪೋಹಗಳು ಎದ್ದಿವೆ. ಸದಾನಂದ ಗೌಡರ ರಾಜಕೀಯ ಹಾದಿ ಮುಸುಕಾಗಿದೆಯೇ? ಅವರ ಮುಂದಿನ ರಾಜಕೀಯ ನಡೆ ಏನು? ಅವರು ರಾಜಕೀಯಕ್ಕೆ ಮರಳುತ್ತಾರಾ? ಎಂಬಿತ್ಯಾದಿ ಪ್ರಶ್ನೆಗಳು ಎದ್ದಿವೆ.

ಕೇಂದ್ರದಲ್ಲಿ ರಸಗೊಬ್ಬರ ಮತ್ತು ರಾಸಾಯನಿಕ ಖಾತೆಯಂತಹ ಮಹತ್ವದ ಜವಾಬ್ದಾರಿ ಹೊತ್ತಿದ್ದ ಡಿವಿಎಸ್ ರ ರಾಜೀನಾಮೆ ಹಲವು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಕಟ ಮಾಡದಂತೆ ತಡೆಯಾಜ್ಙೆ ತಂದಿದ್ದೇ ಇದಕ್ಕೆ ಕಾರಣವಿರಬಹುದು ಎನ್ನಲಾಗಿದೆ.

ಇನ್ನೊಂದೆಡೆ ಸದಾನಂದ ಗೌಡರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಉನ್ನತ ಸ್ಥಾನ ದೊರೆಯಲಿದೆ ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ್ ಹೇಳಿದರು. ಅವರ ಈ ಹೇಳಿಕೆ ಇನ್ನಷ್ಟು ಕುತೂಹಲ ಮೂಡಿಸಿದೆ.

ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು ಎಲ್ಲವನ್ನೂ ಕಾಲವೇ ಉತ್ತರಿಸಬೇಕು ಎಂಬುದು ಬಿಜೆಪಿ ಮೂಲಗಳ ಮಾತು.                        

- Advertisement -

Latest Posts

Don't Miss