www.karnatakatv.net ತುಮಕೂರು: ಶಿರಾ : ಜನ ಸರ್ಕಾರಿ ಸಲವತ್ತು ಪಡೆಯಲು ಅಲೆದಾಡುವುದು ಸಾಮಾನ್ಯವಾಗಿದೆ. ಭ್ರಷ್ಟರಿಗೆ ಲಂಚ ಕೊಟ್ಟು ಜನ ಸುಸ್ತಾಗಿ ಹೋಗ್ತಾರೆ. ಆದರೂ ಸರ್ಕಾರಿ ಸವಲತ್ತುಗಳು ಸಿಗೋದು ಕಷ್ಟ. ಆದ್ರೆ, ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕ್ಷೇತ್ರ ಕ್ಷಮತೆ ಕರ‍್ಯಕ್ರಮದಡಿ ಶಿರಾ ವಿಧಾನಸಭಾ ಕ್ಷೇತ್ರದದಲ್ಲಿ ತೇಜಸ್ವಿನಿ ರಾಜೇಶ್ ಗೌಡ ನೇತೃತ್ವದಲ್ಲಿ ಮಾಡಲಾಗ್ತಿದೆ.. ಶಿರಾ ಶಾಸಕರಾದ ರಾಜೇಶ್ ಗೌಡ ಪತ್ನಿ ತೇಜಸ್ವಿನಿ ಟ್ರಸ್ಟಿಯಾಗಿರುವ ಈ ಕ್ಷೇತ್ರ ಕ್ಷಮತೆ ತಂಡ ಇದೀಗ ಶಿರಾ ವಿಧಾನಸಭಾ ಕ್ಷೇತ್ರದಾದ್ಯಂತ ಮತದಾರರ ಮನೆ ಬಾಗಿಲಿಗೆ ಸರ್ಕಾರಿ ಸವಲತ್ತನ್ನ ತಲುಪಿಸುತ್ತಿದೆ.ಶಿರಾ ಕ್ಷೇತ್ರದ ದೊಡ್ಡಾಲದ ಮರ ಗ್ರಾಮದಲ್ಲಿ 100 ಕ್ಕೂ ಫಲಾನುಭವಿಗಳಿಗೆ ವೃದ್ಧಾಪ್ಯ ವೇತನಾ, ಅಂಗವಿಕಲರ ವೇತನ, ವಿಧವಾ ವೇತನ ಸೇರಿದಂತೆ ಮುಖ್ಯಮಂತ್ರಿ ಪರಿಹಾರ ನಿಧಿ ಸಂಬಂಧ ಪತ್ರಗಳನ್ನ ವಿತರಣೆ ಮಾಡಲಾಯ್ತು.. ಈ ತಂಡ ಸರ್ಕಾರಿ ಸವಲತ್ತು ಪಡೆಯಲು ಬೇಕಾದ ಅಪ್ಲಿಕೇಷನ್ ಅಮೌಂಟ್ ಮಾತ್ರ ಸಂಗ್ರಹಿಸಿ ಉಳಿದ ಹಣವನ್ನ ಟ್ರಸ್ಟಿನ ಮೂಲಕವೇ ಭರಿಸಲಾಗ್ತಿದೆ.. ಸರ್ಕಾರ ಲಕ್ಷ ಕೋಟಿ ಯೋಜನೆ ಘೊಷಣೆ ಮಾಡಿದ್ರು ಅದು ತಲುಪೋದು ಶೇಕಡ 10% ಮಾತ್ರ. ಆದ್ರೆ, ಶಿರಾದ ಕ್ಷೇತ್ರ ಕ್ಷಮತೆ ತಂಡದ ಫಲವಾಗಿ 100% ಜನಗಳಿಗೆ ಯೋಜನೆಗಳು ತಲುಪುವಂತಾಗಿದೆ..