ಕೋವಿಡ್- 19 ಕುರಿತು ಬೀದಿ ನಾಟಕದಿಂದ ಜಾಗೃತಿ

www.karnatakatv.net : ರಾಯಚೂರು : ಕೋವಿಡ್ ೧೯ ಕುರಿತು ಜಾಗೃತಿ ಮೂಡಿಸುತ್ತಿರುವ ಕಲಾ ತಂಡ. ಕೋವಿಡ್ ಕುರಿತು ಪ್ರಧಾನಿ ಮೋದಿಜಿ ಮಾತನ್ನೂ ಜನ ಕೇರ್ ಮಾಡದ ಹಿನ್ನಲೆಯಲ್ಲಿ ಸಿದ್ಧಾರ್ಥ್ ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸೇವಾ ಸಂಸ್ಥೆಯಿಂದ ಹಳ್ಳಿ ಹಳ್ಳಿಗಳಿಗೆ ತೆರಳಿ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುತ್ತಿರುವ ಕಲಾವಿದರು. ಕರೋನಾ ಮಹಾಮಾರಿ ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಜಾಗೃತಿಮಾಡುತ್ತ ದಿನದಿಂದ ದಿನಕ್ಕೆ 1-2, 3 ನೇ ಅಲೆಯ ರೂಪದಲ್ಲಿ ಅಪ್ಪಳಿಸುತ್ತಿರುವ ಕರೋನಾ.

ನಾವೂ ನೀವೆಲ್ಲ ಎಚ್ಚರಿಕೆಯಿಂದಿರೋಣ ಎಂಬ ಮಾಹಿತಿನಿಡುತ್ತಿದರು.ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮಗಳಿಗೂ ಭೇಟಿ ಮಾಡಿ ಬೀದಿ ನಾಟಕ ಪ್ರದರ್ಶನ ಮಾಡುತ್ತಿದರು. ಸಾಮಾಜಿ ಅಂತರ ಕಾಯ್ದುಕೊಂಡು ತೆರೆದ ವಾಹನದಲ್ಲಿ ಮೈಕ್ ಅಳವಡಿಸಿ ಜಾಗೃತಿ.ಮೂಡಿಸುವ ಮೂಲಕ ದಿನ ಬೆಳಗ್ಗೆ ೭ ಗಂಟೆಯಿಂದಲೇ ಕರೋನಾ ಜಾಗೃತಿ ಬೀದಿ ನಾಟಕ ಪ್ರಾರಂಭ. ಸಂಜೆ 6 ಗಂಟೆವರೆಗೆ ಪ್ರತೀ ಗ್ರಾಮಕ್ಕೂ ಕಲಾ ತಂಡ‌ ಭೇಟಿ ನೀಡಿ.ಬೀದಿ ನಾಟಕದಿಂದ ಮಾಹಿತಿ ಪಡೆದು ಎಚ್ಚೆತ್ತುಕೊಳ್ಳುತ್ತಿರುವ ಜನ.

About The Author