www.karnatakatv.net : ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ಗೌಡರು ಗ್ರಾಂ ಪಂಚಾಯತಿಯಲ್ಲಿ ಘಟನೆ ನಡೆದಿದೆ . ಸರ್ಕಾರದಿಂದ ಫಲಾನುಭವಿಗಳಿಗೆಂದು ನೀಡಲಾಗಿದ್ದ ಡಸ್ಟ್ ಬಿನ್. ಗೌಡೂರು ಗ್ರಾಂ ಪಂಚಾಯತಿ ಅಧ್ಯಕ್ಷ, ಪಿಡಿಓ ನಿರ್ಲಕ್ಷ್ಯ 6,500 ಡಸ್ಟ್ ಬಿನ್ ಲೂಟಿ ಮಾಡಿ ಮನೆಗೆ ತೆಗೆದು ಕೊಂಡು ಹೋದ ಗ್ರಾಮಸ್ಥರು . 85 ರೂಪಾಯಿ ಒಂದರಂತೆ 6,500 ಬುಟ್ಟಿಗಳು ಇದ್ದು 5.50 ಲಕ್ಷ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ .
ಹಸಿ ಕಸ, ಒಣ ಕಸ ಬೇರೆ ಬೇರೆ ಹಾಕಲು ತಂದಿದ್ದ ಬುಟ್ಟಿಗಳು. ಫಲಾನುಭವಿಗಳಿಗೆ ಎಂದು ತರಿಸಿದ್ದ ಕಸದ ಬುಟ್ಟಿ ಮಹಿಳೆಯರು, ಮಕ್ಕಳು ಎನ್ನದೇ ಸಿಕ್ಕ ಸಿಕ್ಕವರೆಲ್ಲಾ ದೋಚಿದ್ದೇ ದೋಚಿದ್ದು. ಜನ ಬುಟ್ಟಿ ತೆಗೆದುಕೊಂಡು ಹೋಗುವ ವಿಡಿಯೋಗಳು ಸಮಾಜಿಕ ಜಾಲತಾಣ ವೈರಲ್ ಆಗಿವೆ . ನಿಜವಾದ ಫಲಾನುಭವಿಗಳಿಗೆ ಬುಟ್ಟಿ ನೀಡಲು ಒತ್ತಾಯಮಾಡಿದರು.




