www.karnatakatv .net: ಮುಖ್ಯಮಂತ್ರಿ ಬಿಎಸ್ ವೈ ಅವರು ದೆಹಲಿಯಿಂದ ವಾಪಾಸ್ ಬಂದ ಬಳಿಕವೂ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಮಾತು ಬಂದಿದೆ. ಆದರೆ ಯಾವುದೇ ಬದಲಾವಣೆ ಇಲ್ಲದೆ ಇನ್ನೂ ಎರಡು ವರ್ಷ ಸಿಎಂ ಆಗಿಯೇ ಇರುತ್ತಾರೆ ಬಿಸ್ ವೈ ಎಂದು ಕಟೀಲ ಅವರು ಹೇಳಿದ್ದಾರೆ ರಾಜ್ಯದ ನಾಯಕತ್ವ ಬದಲಾವಣೆ ಕುರಿತು ಭಾನುವಾರ ಸಂಜೆ ವೈರಲ್ ಆಗಿರುವ ಅಡಿಯೋ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಸೇರಿದ್ದು ಎಂದೇ ಬಿಂಬಿತವಾಗಿದೆ. ಈ ಅಡಿಯೋ ನನ್ನದಲ್ಲ, ಇದನ್ನು ಯಾರು ಮಾಡಿದ್ದಾರೋ ನನಗೆ ಗೊತ್ತಿಲ್ಲ. ನಮ್ಮ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಮಾತೇ ಇಲ್ಲ. ನನ್ನ ಅಡಿಯೋ ಫೇಕ್ ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ದೂರು ಕೊಟ್ಟು ತನಿಖೆಗೆ ಕೋರುತ್ತೇನೆ ಎಂದು ಕಟೀಲ್ ಮಾಧ್ಯಮಗಳಿಗೆ ನಳಿನ್ ಕುಮಾರ್ ಕಟೀಲು ಸ್ಪಷ್ಟನೆ ನೀಡಿದ್ದಾರೆ




