www.karnatakatv.net : ಇಡೀ ಜಗತ್ತು ಮಹಾಮಾರಿ ಕೊರೊನಾ ದಿಂದ ತತ್ತರಿಸಿ ಹೋಗಿದೆ ಅದರಲ್ಲೂ ಈಗ ಕೊರೊನಾ ದಿನೆ ದಿನೆ ಹೊಸತನ್ನು ಸೃಷ್ಠಿಸಿ ಜನರ ಸಾವಿಗೆ ಕಾರಣವಾಗುತ್ತಿದೆ, ಇದರ ನಡುವೆ ಚೀನಾದಲ್ಲಿ ಮಂಕಿ ಬಿ ವೈರಸ್ ಕೂಡಾ ಆತಂಕಕ್ಕೆ ಕಾರಣವಾಗಿದೆ. ಆತಂಕಕಾರಿ ವೈರಾಣುಗಳ ಸಾಲಿಗೆ ಹೊಸದೊಂದು ಸೇರ್ಪಡೆಯಾಗಿದ್ದು, ಇಂಗ್ಲೆಂಡ್ನಲ್ಲಿ ಈಗಾಗಲೇ ತಳಮಳ ಹುಟ್ಟುಹಾಕಿದೆ. ನೊರೊವೈರಸ್ ಅಥವಾ ವಾಮಿಟಿಂಗ್ ಬಗ್ ಎಂದು ಕರೆಯಲ್ಪಡುವ ಈ ವೈರಾಣು ಇಂಗ್ಲೆಂಡ್ನಲ್ಲಿ ದಿನೇ ದಿನೇ ವ್ಯಾಪಿಸುತ್ತಿದೆ.
ನೊರೊವೈರಸ್ ಒಂದು ಸಾಂಕ್ರಾಮಿಕ ಕಾಯಿಲೆಗೆ ಕಾರಣವಾದ ವೈರಾಣುವಾಗಿದ್ದು, ಅಮೆರಿಕಾದಲ್ಲಿ ಆಹಾರದಿಂದ ಉಂಟಾಗುವ ಹೆಚ್ಚಿನ ಸಮಸ್ಯೆಗಳಿಗೆ ಇದೇ ವೈರಾಣು ಮೂಲವಾಗಿದೆ ಎಂದು ಸಿಡಿಸಿ ಹೇಳಿದೆ. ಇದನ್ನು ಹೊಟ್ಟೆ ಜ್ವರ ಎಂದೂ ಕರೆಯಲಾಗುತ್ತದೆ.




