ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಮಳೆರಾಯನ ಅರ್ಭಟ ಮುಂದುವರೆದಿದೆ. ರಾತ್ರಿಯಿಂದ ನಿರಂತರವಾಗಿ ಅವಳಿ ನಗರದಲ್ಲಿ ಮಳೆಯಾಗುತ್ತಿದ್ದು, ಜನಜೀವನ ಅಸ್ಯವ್ಯಸ್ತಗೊಂಡಿದೆ. ಕಳೆದ ಸೋಮವಾರ ಹಾಗೂ ಮಂಗಳವಾರದಂದು ನಗರಗಳಲ್ಲಿ ಕೊಂಚ ವರುಣ ಬೀಡುವು ನೀಡಿದ್ದ. ಆದರೆ ಈಗ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಜನ ಕೆಲಸ ಕಾರ್ಯ ಬಿಟ್ಟು ಮನೆಯಲ್ಲಿ ಉಳಿಯುವಂತಾಗಿದೆ.

ನಗರಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಹುಬ್ಬಳ್ಳಿ ನಗರದ ಮಂಟೂರ ರಸ್ತೆ, ಹಳೇಹುಬ್ಬಳ್ಳಿ, ಸೆಟ್ಲಮೆಂಟ್, ಚನ್ನಪೇಟ, ಆನಂದ ನಗರ, ಗಣೇಶ ನಗರ, ಬೆಂಗೇರಿ, ಸಿದ್ದೇಶ್ವರ ಪಾರ್ಕ್, ತೋಳನಕೆರೆ, ನವ ಅಯೋಧ್ಯಾ ನಗರ ಮೂರನೇ ಕ್ರಾಸ್, ಮಂಜುನಾಥ ನಗರ, ರಣದಮ್ಮ ಕಾಲೊನಿ, ಮಾಧವನಗರ, ದೇವಾಂಗಪೇಟೆ ಸೇರಿದಂತೆ ಹಲವು ಪ್ರದೇಶದ ಕೆಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜನತಾ ಬಜಾರ್ ಹಾಗೂ ದುರ್ಗದ ಬೈಲ್ ಪ್ರದೇಶ ಕಾಲಿಡದಂತ ಸ್ಥಿತಿ ನಿರ್ಮಾಣವಾಗಿದ್ದು, ವ್ಯಾಪಾರಸ್ಥರು ಪರದಾಡುವಂತಾಗಿದೆ.


ಇನ್ನೂ ಅವಳಿನಗರದಲ್ಲಿ ಮೂರುದಿನಗಳ ಕಾಲ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮತ್ತಷ್ಟು ಆತಂಕ ಸೃಷ್ಟಿಯಾಗಿದೆ.




