ಗುರುಪೂರ್ಣಿಮಾ ಮಹೋತ್ಸವ

www.karnatakatv.net: ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯತೆ ಅಲ್ಲದೆ ಶೈಕ್ಷಣಿಕ ಮತ್ತು ವಿದ್ವಾಂಸರ ವೃಂದದಲ್ಲೂ ಮಹತ್ವ ಇದೆ. ಹಿಂದೂ ಪಂಚಾಂಗದ ಆಷಾಢ ಮಾಸದ ಹುಣ್ಣಿಮೆಯನ್ನು ಹಿಂದೂಗಳು ಸಾಂಪ್ರದಾಯಿಕವಾಗಿ ಗುರು ಪೂರ್ಣಿಮೆ ಎಂದು ಆಚರಿಸುತ್ತಾರೆ. ಈ ದಿನದಂದು, ಹಿಂದೂಗಳು ಮತ್ತು ಬೌದ್ಧರು ತಮ್ಮ ಗುರುವಿಗೆ ಪೂಜೆ ಸಲ್ಲಿಸುತ್ತಾರೆ. ಗುರುಪೂರ್ಣಿಮೆಯ ದಿನ ಗುರು ಸೂತ್ರದ ಪ್ರಭಾವ ಬೇರೆ ದಿನಗಳಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ.

ರಾಷ್ಟ್ರ ಮತ್ತು ಧರ್ಮ ಸಂಕಷ್ಟದಲ್ಲಿದ್ದಾಗ ಧರ್ಮ ಸ್ಥಾಪನೆಯ  ಕಾರ್ಯವನ್ನು ಗುರು- ಶಿಷ್ಯ ಪರಂಪರೆಯು ಮಾಡಿದೆ. ಭಗವಾನ ಶ್ರೀಕೃಷ್ಣನು ಅರ್ಜುನನ ಮಾಧ್ಯಮದಿಂದ ಮತ್ತು ಆರ್ಯ ಚಾಣಕ್ಯರು ಸಾಮ್ರಾಟ ಚಂದ್ರಗುಪ್ತನ ಮಾಧ್ಯಮದಿಂದ ಆದರ್ಶ ಧರ್ಮಾಧಿಷ್ಠಿತ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದರು.  ಹಿಂದೂ ಧರ್ಮ , ಸಮಾಜ ಮತ್ತು ರಾಷ್ಟ್ರದ ಮೇಲೆ ಅನೇಕ ಆಘಾತಗಳು ಆಗುತ್ತಲಿವೆ . ಜಾತ್ಯಾತಿತ ವ್ಯವಸ್ಥೆಯ ಹೆಸರಿನಲ್ಲಿ ಜನರು ಲುಟಿ ಮತ್ತು ಶೋಷಣೆ ಮಾಡುವ ಈ ವ್ಯವಸ್ಥೆಗೆ ಪರ್ಯಾಯವಾಗಿ ರಾಮರಾಜ್ಯದಂತಹ ಆದರ್ಶ ಹಿಂದೂ ರಾಷ್ಟ್ರ ವನ್ನು ಸ್ಥಾಪಿಸುವುದು ಕಾಲಾನುಸಾರ ಶ್ರೀಗುರುಸೇವೆಯೇ ಆಗಿದೆ.

ಕೊರೊನಾ ಮಹಾಮಾರಿಯಂತಹ ಸಂಕಟವನ್ನು ಎದುರಿಸಲು  ಆದ್ಯಾತ್ಮಕ ಶಕ್ತಿ ಅವಶ್ಯಕವಿದ್ದು, ಈ ಮಹೋತ್ಸವದಲ್ಲಿ ಭಾಗವಹಿಸುವದರಿಂದ ಗುರುವಿನ ಆಶೀರ್ವಾದ ಸಿಗಲಿದೆ, ಹಾಗೆಯೇ ಹಿಂದುಗಳ ಧಾರ್ಮಿಕ ಸಂಘಟನೆಯೂ ಆಗುತ್ತದೆ. ಆದ್ದರಿಂದ ಎಲ್ಲಾ ರಾಷ್ಟ್ರ ಮತ್ತು ಧರ್ಮ ಪ್ರೇಮಿ ಹಿಂದೂಗಳು ಕುಟುಂಬ ಸಮೇತರಾಗಿ ಆನ್ ಲೈನ್ ನಲ್ಲಿ ಗುರುಪೂರ್ಣಿಮಾ ಮಹೋತ್ಸವದ ಲಾಭವನ್ನು ಮಡೆದುಕೊಳ್ಳಿ ಮತ್ತು ಎಲ್ಲಾ  ಕುಟುಂಬದವರಿಗೂ, ಸ್ನೇಹಿತರಿಗೂ ಆಮಂತ್ರಣ ತಿಳಿಸಿ ಎಂದು ನವಜಾಗೃತಿ ಸಮಿತಿಯ ವತಿಯಿಂದ ಮನವಿ ಮಾಡಿದೆ.

About The Author