www.karnatakatv.net : ಬೆಂಗಳೂರು : ಬದಲಾವಣೆ ಎಂಬ ಬಡಿದಾಟವನ್ನು ಗೆದ್ದು ನೂತನ ಸಿಎಂ ಆಗಿರೋ ಬಸವರಾಜ್ ಬೊಮ್ಮಾಯಿ ಅವರು ಉತ್ತರ ಕರ್ನಾಟಕ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ರಾಜ್ಯದ ಚುಕ್ಕಾಣಿ ಹಿಡಿದ ಮರುದಿನವೇ ಭೀಕರ ಮಳೆಯಿಂದ ನೆರೆಗೆ ತುತ್ತಾಗಿರೋ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ನಿನ್ನೆ ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ ಇಂದು ಉತ್ತರ ಕರ್ನಾಟಕ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ. ಈ ಮೂಲಕ ನೆರೆ ಪಿಡಿತ ಜನರ ಜೊತೆ ತಮ್ಮ ಸರ್ಕಾರ ಇದೆ ಅನ್ನೋದನ್ನ ತಿಳಿಸುವದಕ್ಕೆ ಹೊಸ ಸಿಎಂ ಮುಂದಾಗಿದ್ದಾರೆ.
ಇನ್ನು ಪ್ರವಾಹ ಪ್ರವಾಸದ ಕುರಿತು ಮಾತನಾಡಿದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ಕನ್ನಡದಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಮಳೆ ಹಾನಿ ಸಮೀಕ್ಷೆ ಮಾಡಿ ಅಧಿಕಾರಿಗಳ ಜತೆ ಚರ್ಚಿಸುವೆ. ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಿ ಕ್ರಮಕ್ಕೆ ಸೂಚಿಸುವೆ ಎಂದು ಹೇಳಿದ್ರು.
ಹುಬ್ಬಳ್ಳಿಯಿಂದ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಅಂಕೋಲಾಕ್ಕೆ ಸಿಎಂ ಬೊಮ್ಮಾಯಿ ಭೇಟಿ ನೀಡಲಿದ್ದಾರೆ..ಒಟ್ಟಿನಲ್ಲಿ ಮುಖ್ಯಮಂತ್ರಿ ಆಗುತ್ತಿದ್ದಂತೆ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಚುರುಕಿನ ಕೆಲಸ ಮಾಡೋಕೆ ಹೊರಟಿದ್ದಾರೆ. ನೂತನ ಸಿಎಂ ತಮ್ಮ ಜಿಲ್ಲಾ ಪ್ರವಾಸವನ್ನ ನೆರೆಪೀಡಿತ ಜಿಲ್ಲೆಯಿಂದಲೇ ಆರಂಭಿಸಿದ್ದು ಭಾರಿ ಕೂತುಹಲ ಕೆರಳಿಸಿದೆ.

