- Advertisement -
www.karnatakatv.net : ಶಿರಾ : ತುಮಕೂರು ನಾಲಾ ವಲಯದ ಪಟ್ರಾವತನಹಳ್ಳಿ ಬಳಿಯ 106ನೇ ಎಸ್ಕೇಪ್‍ಗೇಟ್ ಮೂಲಕ ಕಳ್ಳಂಬೆಳ್ಳ, ಶಿರಾ ಕಡೆಗೆ ಹೇಮಾವತಿ ನೀರು ಹರಿಯಲು ಆರಂಭಗೊಂಡ ಹಿನ್ನೆಲೆಯಲ್ಲಿ ಹೇಮಾವತಿಯ ನಾಲಾವಲಯದ ಎಸ್ಕೇಪ್ ಗೇಟ್‍ಗೆ ಇಂದು ಶಾಸಕ ಡಾ.ರಾಜೇಶ್ ಗೌಡ ಭೇಟಿ ನೀಡಿ ಚಾಲನೆ ನೀಡಿದರು. ಪ್ರಸಕ್ತ ವರ್ಷ ಗೊರೂರು ಜಲಾಶಯ ಬಾಗದಲ್ಲಿ ಹೆಚ್ಚು ಮಳೆ ಯಾಗತ್ತಿದ್ದು ಯಥೇಚ್ಚ ನೀರು ಕೂಡ ಇದೆ. ಈ ವರ್ಷ ನಮಗೆ ನೀಡಬೇಕಾದ . ನೀರನ್ನು ಪಡೆದೇ ತೀರಬೇಕಿದೆ.
ಶಿರಾ, ಕಳ್ಳಂಬೆಳ್ಳ ಕೆರೆಗಳಿಗಷ್ಟೇ ಅಲ್ಲದೆ ಮದಲೂರು ಕೆರೆಯನ್ನೂ ತುಂಬಿಸಲು ಈ ಬಾಗದ ಸಂಸದರು ಸೇರಿದಂತೆ ಜಿಲ್ಲಾ ಸಚಿವರು ಸಹಕಾರ ದಿಂದ ಈ ವರ್ಷ ತುಂಬಿಸುವುದಾಗಿ ವಿವರಿಸಿದರು…
- Advertisement -