ಲವ್ಲಿನಾ ಗೆ ಕಂಚಿನ ಪದಕ

www.karnatakatv.net : ಒಲಿಂಪಿಕ ವಿಶ್ವಚಾಂಪಿಯನ್ ನಲ್ಲಿ ಮೇರಿ ಕೋಮ್ ಅವರು ಪದಕನ್ನು ಗೆಲ್ಲದೆ ಇದ್ದರು  ಅವರನ್ನು ನೋಡಿ ಅವರದೆ ಹಾದಿಯಲ್ಲಿ ನಡೆದಿರುವ ಯುವ ಬಾಕ್ಸರ್ ಲವ್ಲಿನಾ ಬೊರ್ಗೊಹೈನ್, ಅವರಿಗೆ ಕಂಚಿನ ಪದಕ ಗೆಲ್ಲುವ ಮೂಲಕ ವಿಶ್ವದೆಲ್ಲೆಡೆ ಕೀರ್ತಿಯನ್ನು ತಂದಿದ್ದಾರೆ

ಮಹಿಳೆಯರ ವೆಲ್ಟರ್‌ವೇಟ್ (69 ಕೆ.ಜಿ) ವಿಭಾಗದ ಕ್ವಾರ್ಟರ್‌ಫೈನಲ್ ಮುಖಾಮುಖಿಯಲ್ಲಿ ಅಸ್ಸಾಂ ಮೂಲದ ಲವ್ಲಿನಾ, ಮಾಜಿ ವಿಶ್ವ ಚಾಂಪಿಯನ್ ಚೀನಾ ತೈಪೆಯ ಚಿನ್ ಚೆನ್ ವಿರುದ್ಧ 4-1ರ ಅಂತರದ ಗೆಲುವು ದಾಖಲಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಇದರೊಂದಿಗೆ ಕನಿಷ್ಠ ಕಂಚಿನ ಪದಕ ಖಚಿತಪಡಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ತಮ್ಮ ಮೆಚ್ಚಿನ ಮೇರಿ ಕೋಮ್ ಹಾಗೂ ವಿಜೇಂದರ್ ಸಿಂಗ್ ಸಾಧನೆಯನ್ನು ಲವ್ಲಿನಾ ಸರಿಗಟ್ಟಿದ್ದಾರೆ. ಅಲ್ಲದೆ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಭಾರತದ ಮೂರನೇ ಬಾಕ್ಸರ್ ಎಂಬ ಹಿರಿಮೆಗೆ ಭಾಜನರಾಗಿದ್ದಾರೆ.

About The Author