www.karnatakatv.net : ವಿಜಯಪುರ : ಯಡಿಯೂರಪ್ಪ ವಿರುದ್ದ ಆರೋಪ ಮಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.. ನಾನು ಮುಖ್ಯಮಂತ್ರಿಯಾಗುವ ಅವಕಾಶವನ್ನು ತಪ್ಪಿಸಿದ್ದೇ ಬಿ ಎಸ್ ವೈ. ಯತ್ನಾಳ್ ಅವರನ್ನು ಸಿಎಂ ಮಾಡಿದರೆ 3 ತಿಂಗಳಲ್ಲಿ ಸರ್ಕಾರವನ್ನೇ ಬೀಳಿಸುತ್ತೇನೆ ಎಂದು ಕೇಂದ್ರ ನಾಯಕರನ್ನು ಬೆದರಿಸಿ ಬೊಮ್ಮಾಯಿ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್, ಯಡಿಯೂರಪ್ಪ 10 ಸಾವಿರ ಕೋಟಿ ಭ್ರಷ್ಟಾಚಾರ ನಡೆಸಿದ್ದಾರೆ. ಒಂದು ವೇಳೆ ಯತ್ನಾಳ್ ಸಿಎಂ ಆದರೆ ಯಡಿಯೂರಪ್ಪ ಅವರ ಅಕ್ರಮ, ಭ್ರಷ್ಟಾಚಾರ ಬಯಲಿಗೆ ಬರುತ್ತೆ. ಹಲವರು ಜೈಲು ಸೇರಬೇಕಾಗುತ್ತೆ ಎಂಬ ಭಯದಿಂದ ಸಿಎಂ ಆಗುವುದನ್ನು ತಡೆದಿದ್ದಾರೆ, ಬೆಲ್ಲದ್, ಬೊಮ್ಮಾಯಿ ಇವರಾರ ಹೆಸರೂ ಇರಲಿಲ್ಲ. ಆದರೆ ಯಡಿಯೂರಪ್ಪ ನವರು ಧರ್ಮೇಂದ್ರ ಪ್ರಧಾನ್ ಹಾಗೂ ಇನ್ನಿತರ ಕೇಂದ್ರ ನಾಯಕರನ್ನು ಹೆದರಿಸಿ ನಾನು ಸಿಎಂ ಆಗುವುದನ್ನು ತಪ್ಪಿಸಿದರು. ನಾನೇನಾದ್ರೂ ಸಿಎಂ ಆಗಿದ್ರೆ 150 ಸೀಟ್ ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ.