ಪೂಜಾರಿಗಳಿಗೆ ದಕ್ಷಿಣೆ ಕೇಳಲು ನಿಂತ ಭ್ರಷ್ಟ, ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ

ರಾಯಚೂರು : ಜಿಲ್ಲೆಯ ಬಡ ಅರ್ಚಕರಿಗೆ ಸರ್ಕಾರದಿಂದ ಬರುವ ವಾರ್ಷಿಕ ವರಮಾನದಲ್ಲಿ ಲಂಚಕ್ಕೆ ಅಧಿಕಾರಿಗಳು ಕೈ ಚಾಚುತ್ತಿದ್ದಾರೆ. ಇದೀಗ ಮಾಧ್ಯಮದ ಮುಂದೆ ಅಂತಹಭ್ರಷ್ಟ ಅಧಿಕಾರಿಗಳ ಭ್ರಷ್ಟಾಚಾರ ಬಟಾಬಯಲಾಗಿದೆ.

ಲಿಂಗಸ್ಗೂರು ತಹಶಿಲ್ದಾರ ಕಚೇರಿಯಲ್ಲಿ ನಡೆದಿರುವ ಭ್ರಷ್ಟಾಚಾರಬಿದಾಗಿದ್ದು, ಸೈಯದ್ ನೂರುದ್ದೀನ್ ಅಲ್ವಿ ಎಂಬುವ ಅಧಿಕಾರಿ ಇಲ್ಲಿನ ದಾಖಲೆಗಳ ಕೊಠಡಿಯನ್ನೇ ಲಂಚ ತೆಗೆದುಕೊಳ್ಳಲು ಬಳಸಿಕೊಂಡಿದ್ದಾನೆ. ಅಲ್ವಿ ಎಂಬ ಭ್ರಷ್ಟ ಅಧಿಕಾರಿಯ ಭ್ರಷ್ಟಾಚಾರ ಇದೀಗ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲ್ಲೂಕಿನ ತಹಶೀಲ್ದಾರ ಕಚೇರಿಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಸೆಕ್ಷನ್ ಆಫಿಸರ್ ಆಗಿ ಕಾರ್ಯ ನಿರ್ವಹಿಸ್ತಿರೋ ಈ ಅಲ್ವಿ,  ಸರ್ಕಾರದಿಂದ ಬಡ ಅರ್ಚಕರಿಗೆ  ಮಂಜೂರಾಗುವ ತಸ್ತಿಕ್ ಅಮೌಂಟ್ ಚೆಕ್ ಗೆ ಲಂಚ ತೆಗೆದುಕೊಳ್ತಿದ್ದಾನೆ. ಇನಾಮ್ ಭೂಮಿ ಹೊಂದಿದ ದೇವಾಲಯದ ಅರ್ಚಕರಿಗೆ ಸರ್ಕಾರದಿಂದ ಬರುವ ತಸ್ತಿಕ್ ಹಣ ಇದಾಗಿದ್ದು, ನ್ಯಾಯವಾಗಿ ಬಡ ಪೂಜಾರಿಗಳ ಹೊಟ್ಟೆ ಮೇಲೆ ಹೊಡೆಯುತ್ತಿದ್ಸಾನೆ. ಒಬ್ಬ ಫಲಾನುಭವಿ ಬಳಿ ಒಂದು ಚೆಕ್ ಗೆ 6000 ರೂಪಾಯಿಯಂತೆ ಲಂಚ  ಫಿಕ್ಸ್ ಮಾಡಿರುವ ಈತ ಬಡವರ ರಕ್ತ ಹೀರುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.

ಇನ್ನು ತಾಲ್ಲೂಕಿನಲ್ಲಿ ಈ ರೀತಿಯಾದ ವೆ 338 ದೇವಾಲಯಗಳಿವೆ.. ಒಂದು ದೇವಾಲಯಕ್ಕೆ 6000 ದಂತೆ ಅಧಿಕಾರಿಗೆ ಲಂಚ ನೀಡಿದರೆ ಮಾತ್ರ ಅರ್ಚಕರಿಗೆ ಚೆಕ್ ನೀಡುತ್ತಾನೆ. ಇಲ್ಲದಿದ್ದರೆ ಇಲ್ಲ. ಈ ಕುರಿತು ಮಾದ್ಯಮಗಳ ಕೈಗೆ ಸಿಕ್ಕಿಹಾಕಿಕೊಂಡ ಈತ ಇದೀಗ ಲಂಚದ ದೃಶ್ಯವಿರುವುದನ್ನ ಖಾತ್ರಿ ಪಡಿಸಿಕೊಂಡು ಕ್ಷಮೆಯಾಚಿಸಿದ್ದಾನೆ. ಅಷ್ಟೇ ಅಲ್ಲ ವಿಡಿಯೋ ಪ್ರಸಾರ ಮಾಡದಂತೆ ಕೈ ಮುಗಿದು ಬೇಡಿಕೊಂಡಿದ್ದಾನೆ..

ಅನಿಲ್ ಕುಮಾರ್  ಕರ್ನಾಟಕ ಟಿವಿ. ರಾಯಚೂರು

About The Author