ರಾಯಚೂರು : ಕೃಷ್ಣಾ ನದಿ ಪ್ರವಾಹ ಹಿನ್ನಲೆ ನದಿಗಳಂತಾದ ರೈತರ ಜಮೀನುಗಳು ನೀರು ಪಾಲಾಗಿವೆ. ಭತ್ತ ಬೆಳೆಗಾರರಲ್ಲಿ ಆತಂಕ ಹೆಚ್ಚಾಗಿದೆ.. ರಾಯಚೂರು ತಾಲ್ಲೂಕಿನ ಕಾಡ್ಲೂರು, ಗುರ್ಜಾಪುರ, ಅರಷಿಣಿಗಿ ರೈತರ ಜಮೀನು ಜಲಾವೃತವಾಗಿರುವ ಘಟನೆ ನಡೆದಿದ್ದು ನದಿ ತೀರದ ನೂರಾರು ಎಕರೆ ಜಮೀನಿನಲ್ಲಿ ಮೊಣಕಾಲುತನಕ ನೀರು ಬಂದಿದು ಬೆಳೆ ನಾಶವಾಗಿದೆ.
ಒಂದು ಎಕರೆಗೆ 20 ರಿಂದ 25 ಸಾವಿರ ರೂಪಾಯಿ ವ್ಯಯಿಸಿ ಬೆಳೆ ಬೆಳೆದಿದ್ರು.. ಇಂದು ಪ್ರವಾಹದಿಂದಾಗಿ ಬೆಳೆದ ಬೆಳೆ ಹಾನಿಯಾಗಿದ್ದರಿಂದ ಕಣ್ಣೀರಿಡುವಂತಾಗಿದೆ. ಇನ್ನೊಂದು ಕಡೆ ನದಿಯಲ್ಲಿ ಮುಳುಗಿದ ನೀರಿನ ಪಂಪ್ ಸೇಂಟ್ ಗಳು ಇದರಿಂದ ನೀರಿಲ್ಲದೆ ಭತ್ತದ ಬೆಳೆ ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೃಷ್ಣಾ ನದಿಗೆ ಬಸವಸಾಗರ ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟ ಹಿನ್ನಲೆಯಲ್ಲಿ ರೈತರ
ಜಮೀನು ಜಲಾವೃತವಾಗಿವೆ . 4.60 ಲಕ್ಷ ಕ್ಯೂಸೆಕ್ಸ್ ನೀರು ಜಲಾಶಯದಿಂದ ನದಿಗೆ ಬಿಟ್ಟ ಹಿನ್ನಲೆಯಲ್ಲಿ ನದಿ ಪಾತ್ರದ ರೈತರ ಜಮೀನಿನಲ್ಲಿ ನೀರು ತುಂಬಿ ಬೆಳೆಗಳು ಸಂಪೂರ್ಣ ನಾಶವಾಗಿದೆ . ಸಹಾಯಕ್ಕೆ ಧಾವಿಸುವಂತೆ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಒತ್ತಾಯಿಸಿದ್ದಾರೆ. ಆದ್ರೆ, ರಾಜ್ಯ ಬಿಜೆಪಿ ಸರ್ಕಾರ ಮಾತ್ರ ಮಂತ್ರಿ ಮಂಡಲದ ಟೆನ್ಶನ್ ನಲ್ಲಿ ರೈತರ ಗೋಳು ಕೆಳದಂತಾಗಿದೆ.
ಅನಿಲ್ ಕುಮಾರ್, ಕರ್ನಾಟಕ ಟಿವಿ. ರಾಯಚೂರು