Saturday, July 12, 2025

Latest Posts

ಪೂರ್ಣಗೊಂಡ 5ಡಿ ಚಿತ್ರದ ಚಿತ್ರೀಕರಣ

- Advertisement -

www.karnatakatv.net : ಬೆಂಗಳೂರು : 5ಡಿ ಚಿತ್ರದ ಚಿತ್ರೀಕರಣವು ಆಗಸ್ಟ್ 4ಕ್ಕೆ ಪೂರ್ಣಗೊಂಡಿದ್ದು , ಎಸ್ ನಾರಾಯಣ್  ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ಚಿತ್ರೀಕರಣ ಮುಗಿದ ಬಳಿಕ ಮಾಧ್ಯಮದ ಮುಂದೆ ಚಿತ್ರತಂಡವು ಮಾತನಾಡಿ ಆ ಚಿತ್ರದ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಗೇ  ಈ ಚಿತ್ರದಲ್ಲಿ ನಾಯಕನಾಗಿ ಆದಿತ್ಯ, ನಾಯಕಿಯಾಗಿ ಆದಿತಿ ಅವರು ನಟಿಸಿದ್ದಾರೆ.

ಈ ಚಿತ್ರದ ಬಗ್ಗೆ ಮಾತನಾಡಿದ ನಾಯಕನಟ ಆದಿತ್ಯ ಅವರು  ನಾನು ಎಸ್ ನಾರಾಯಣ್ ಅವರ ಜೋತೆ ಕೆಲಸ ಮಾಡಿದ್ದೆ ಆದರೆ ಅವರ ಚಿತ್ರದಲ್ಲಿ ನಟಿಸುವ ಅವಕಾಶ  ಈಗ ಸಿಕ್ಕಿದ್ದು ನನಗೆ ತುಂಬಾ ಕುಷಿಯಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಚಿತ್ರೀಕರಣ ಬಗ್ಗೆ ಮಾತನಾಡಿದ ನಿರ್ದೇಶಕ ಎಸ್ ನಾರಾಯಣ್ , ಕಳೆದ ವರ್ಷ ಆಗಸ್ಟ್ 5 ರಂದು ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಲಾಗಿದ್ದು ಇದೇ ವರ್ಷ ಜ.1 ರಂದು ಶೂಟಿಂಗ್ ಶುರುವಾಗಿತ್ತು, ಆದರೆ ಈಗ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ ಎಂದು ಎಸ್ ನಾರಾಯಣ್ ಅವರು ತಿಳಿಸಿದ್ದಾರೆ.

ವಿನುತಾ ಹವಾಲ್ದಾರ್ ಕರ್ನಾಟಕ ಟಿವಿ ಬೆಂಗಳೂರು

- Advertisement -

Latest Posts

Don't Miss