- Advertisement -
www.karnatakatv.net : ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಎರಡನೇ ಹಂತವಾದ ಉಜ್ವಲ 2.0ಗೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಮಹೋಬದಲ್ಲಿ ಎಲ್ ಪಿಜಿ ಸಂಪರ್ಕಗಳನ್ನು ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.
ಉದ್ಘಾಟನೆಯ ನಂತರ ಪ್ರಧಾನಿ ಮೋದಿ ಅವರು ವರ್ಚುವಲ್ ಮೂಲಕ 10 ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕಗಳನ್ನು ವಿತರಿಸಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಧಾನಿ ಪರವಾಗಿ ಮಹಿಳೆಯರಿಗೆ ದಾಖಲೆಗಳನ್ನು ನೀಡಿದರು.
2016 ರಲ್ಲಿ ಆರಂಭವಾದ ಉಜ್ವಲ 1.0 ಸಮಯದಲ್ಲಿ, ಬಿಪಿಎಲ್ ಕುಟುಂಬದ ಐದು ಕೋಟಿ ಮಹಿಳಾ ಸದಸ್ಯರಿಗೆ ಎಲ್ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿತ್ತು.
- Advertisement -