www.karnatakatv.net : ಹಾವೇರಿ: ಆತ ಮೂಲತಃ ಕರ್ನಾಟಕದವನೇ ಆಗಿದ್ದರೂ, ಪಾತಕ ಲೋಕದಲ್ಲಿ ಸದ್ದು ಮಾಡಿದ್ದು ಮಾತ್ರ ಹೊರ ರಾಜ್ಯ ಗೋವಾದಲ್ಲಿ ಕಂಡ ಕಂಡವರಿಗೆ ಹಣಕ್ಕಾಗಿ ಕಿರುಕುಳ ಕೊಡುತ್ತಿದ್ದವನು ಹುಟ್ಟೂರಲ್ಲಿ ಬಂದು ಹತ್ಯೆ ಆಗಿದ್ದಾನೆ. ಅವನ ಕ್ರೂರ ಕ್ರೌರ್ಯ ಪಾಪಕ್ಕೆ ಗೆಳೆಯರೆ ನಡು ರಸ್ತೆಯಲ್ಲಿಯೇ ಕೊಚ್ಚಿ ಕೊಲೆಗೈದು ವಿಕೃತಿ ಮರೆದಿದ್ದಾರೆ. ನಟೋರಿಯಸ್ ರೌಡಿಯೊಬ್ಬನ ಹತ್ಯೆ ಕಂಡು ಅಕ್ಷರಶಃ ಸವಣೂರು ಜನರು ಬೆಚ್ಚಿಬಿದ್ದು,ಮನೆ ಬಿಟ್ಟು ಹೊರಬರುವ ಧೈರ್ಯ ಮಾಡುತ್ತಿಲ್ಲ
ಹೌದು ಕಳೆದ ಎರಡು ದಿನ ಕರ್ನಾಟಕದಲ್ಲಿ ನಡೆದ ಒಂದು ಹತ್ಯೆ ಸದ್ದು, ಹೊರ ರಾಜ್ಯಕ್ಕೆ ಕೇಳಿಸಿದೆ. ನಡು ರಸ್ತೆಯಲ್ಲಿ ರೌಡಿ ಶಿಟರ್ ಹತ್ಯೆ ನಡೆದು ಜನರ ನಿದ್ದೆ ಗೆಡಿಸಿದೆ ಕೊಲೆಯಾದ ವ್ಯಕ್ತಿ ಹಿಸ್ಟರಿ ಕೇಳಿದರೆ ನೀವು ನಿಜಕ್ಕೂ ಬೆಚ್ಚಿ ಬಿಳ್ತಿರಾ. ಆತ ಮೂಲತಃ ಕರ್ನಾಟಕ ಮೂಲದವನೇ ಆದರು ಅವನ ಗತ್ತು ಗಮ್ಮತ್ತು ಪಕ್ಕದ ರಾಜ್ಯದಲ್ಲಿತ್ತು. ಅಲ್ಲಿಯ ಜನರ ಹಾಗೂ ಪೊಲೀಸರ ನಿದ್ದೆಗೆಡಿಸಿದ್ದ ರೌಡಿ ಶೀಟರ್ ಹಾವೇರಿ ಜಿಲ್ಲೆಯಲ್ಲಿ ಬರ್ಬರವಾಗಿ ಕೊಲೆಯಾಗಿ ಹೋಗಿದ್ದಾನೆ.ಆತನ ಕೊಲೆಯಾದ ವಿಡಿಯೋ ನೋಡಿದರೆ ನಿಜಕ್ಕೂ ನಾವು ಇರೋದು ಕರ್ನಾಟಕದಲ್ಲಾ ಅಥವಾ ಪಕ್ಕದ ಪಾಕಿಸ್ತಾನದಲ್ಲಾ ಎಂಬ ಅನುಮಾನ ಹುಟ್ಟೋದು ಪಕ್ಕಾ..
ಮೊನ್ನೆಯ ದಿನ ಹಾವೇರಿ ಜಿಲ್ಲಾ ಪೊಲೀಸರ ನಿದ್ದೆಗೆಡಿಸಿದ್ದ ಪ್ರಕರಣ ಇಂದು ಮತ್ತೆ ಸುದ್ದಿಯಾಗಿದೆ ಕೊಲೆಯಾದ ನಟೋರಿಯಸ್ ರೌಡಿಯನ್ನು ಕೊಚ್ಚಿಕೊಲೆ ಮಾಡಲಾಗಿದ ವೀಡಿಯೋ ಇಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.ಆ ವಿಡಿಯೋ ನೋಡಿದರೆ ಎಂತವರ ಎದೆ ಝಲ್ ಎನ್ನದೆ ಇರದು.ವ್ಯಕ್ತಿ ಸಾಯುವವರೆಗೂ ಕೊಡಲಿ ಮತ್ತು ಮಚ್ಚಿನಿಂದ ಕೊಚ್ಚಿ ಹಾಕಿದ್ದಾರೆ. ನಡು ರಸ್ತೆಯಲ್ಲಿ ನಡೆದ ಈ ಘಟನೆಯನ್ನು ರಸ್ತೆಯಲ್ಲಿ ಹೋಗುವವರು ಬರುವವರು ದಿಗ್ಭಾಂತರಾಗಿ ನೋಡುತ್ತಾ ಹೋಗುತ್ತಿದ್ದರು ಅಲ್ಲಿ ನಡೆಯುತ್ತಿರುವ ರಕ್ತದ ಕಾಳಗವನ ಯಾರು ಕೂಡ ಬಿಡಿಲು ಮುಂದಾಗಿಲ್ಲ.ಸುಮಾರು ಐದಾರು ಏಟಿನಲ್ಲಿ ಅಂತರಾಜ್ಯದ ರೌಡಿ ಶಿಟರ್ ಕಥೆ ಅಂತ್ಯವಾಗಿದೆ.
ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕಾರಡಿಗಿ ಕ್ರಾಸ್ ಬಳಿ ಈ ಘಟನೆ ನಡೆದಿದ್ದು ದೊಸ್ತಿಗಳಿಂದಲೇ ರೌಡಿ ಶಿಟರ್ ಅನ್ವರ ಶೇಕ್ ಅಲಿಯಾಸ್ ಟೈಗರ್ ಅನ್ವರ ಕಥೆ ಎಂಡ್ ಆಗಿದೆ.ಇಲ್ಲಿ ಬಡಿದಾಡಿಕೊಂಡವರು ಯಾರು ಸಂಸ್ಕಾರಸ್ಥ, ಸೌಮ್ಯ ಸ್ವಾಭಾವದರಲ್ಲಿ ಬದಲಾಗಿ ಎಲ್ಲರೂ ಕ್ರಿಮಿನಲ್ ಬ್ಯಾಗ್ರೌಂಡ್ ಉಳ್ಳವರೇ ಆಗಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಅಂದರೆ ಇವರೆಲ್ಲ ರೌಡಿಗಳಾಗಿದ್ದರಿಂದ ಹಾವೇರಿ ಜಿಲ್ಲೆ ಸವಣೂರು ಜೊತೆಗೆ ಹುಬ್ಬಳ್ಳಿಯಲ್ಲಿ ತಕ್ಕ ಮಟ್ಟಿಗೆ ಇವರು ಹವಾ ಕ್ರಿಯೇಟ್ ಮಾಡಿಕೊಂಡಿದ್ದವರು. ಆದ್ದರಿಂದ ವಸೂಲಿ ವಿಚಾರವಾಗಿ ಈ ಕೊಲೆ ನಡೆದಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ದೊಸ್ತರ ನಡುವೆ ನಡೆದ ಮಾತಿನ ಚಕಮಕಿ ಕೊಲೆಗೆ ಮಾಡುವಷ್ಟು ಕೋಪಕ್ಕೆ ತಿರುಗಿದೆ. ಮೊದಲೇ ಪಕ್ಕಾ ಹರಾಮಿ ಆಗಿದ್ದ ಅನ್ವರ ದೊಸ್ತಿ ಹತ್ತಿರವೇ ಕಿರಿಕ್ ಮಾಡಿಕೊಳ್ಳುವ ರೂಡಿ ಮೊದಲಿನಿಂದಲೂ ಇವನಿಗೆ ಸಾಮಾನ್ಯವಾಗಿತ್ತು ಆದರೆ ಇಂದು ಅದು ಅವನ ಜೀವಕ್ಕೆ ಕುತ್ತು ತಂದಿದ್ದಂತು ಸತ್ಯ..
ಕರ್ನಾಟಕ ಟಿವಿ ಹುಬ್ಬಳ್ಳಿ