Sunday, December 22, 2024

Latest Posts

ಹಿಂದಿನ ತಪ್ಪಾದ ತೆರಿಗೆಯನ್ನು ತಪ್ಪಿಸಿಲ್ಲ; ಪಿಎಂ ಮೋದಿ

- Advertisement -

www.karnatakatv.net : ನವದೆಹಲಿ: ಹಿಂದಿನ ಕಾಲದ ತೆರಿಗೆಯನ್ನು ಕೊನೆಗೋಳಿಸುವ ಸರ್ಕಾರದ ಕ್ರಮವು ಈ ಹಿಂದೆ ಮಾಡಿದ ತಪ್ಪನ್ನು ಸರಿಪಡಿಸುವದಾಗಿ ಸೂಚಿಸುತ್ತದೆ ಎಂದು ಭಾರತಿಯ ಕೈಗಾರಿಕಾ ಒಕ್ಕೂಟ ಸಿಐಐ ನ ವಾರ್ಷಿಕ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಹೇಳಿದರು . ಮೇ 2012 ರ ಮೊದಲು ಭಾರತಿಯ ಆಸ್ತಿಗಳ ಪರೋಕ್ಷ ವರ್ಗಾವನೆಗಾಗಿ ಸಂಗ್ರಹಿಸಿದ ತೆರಿಗೆಗಳನ್ನು ಸರ್ಕಾರ ಕಳೆದ ವಾರ ಕೊನೆಗೊಳಿಸಿತು ಹಾಗೆ ಯಾವುದೇ  ಹಾನಿ ಹಕ್ಕುಗಳನ್ನು ಸಲ್ಲಿಸುವದಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

ಪೂರ್ವಾನ್ವಯ ತೆರಿಗೆಯನ್ನು ತೆಗೆದುಹಾಕುವ ಮೂಲಕ ನಾವು ತಪ್ಪನ್ನು ತಿದ್ದುಕೊಂಡಿದ್ದೆವೆ ಹಾಗೇ ಸರ್ಕಾರ ಮತ್ತು ಉದ್ಯಮದ ನಡುವಿನ ವಿಶ್ವಾಸ ಹೆಚ್ಚಾಗುತ್ತದೆ. ಆನ್ ಲೈನ್ ನಲ್ಲಿ ನಡೆದ ಸಿಐಐ ಸಭೆಯಲ್ಲಿ ಮೋದಿ ಅವರು ಹೇಳಿದರು. ಈ ನಿಟ್ಟಿನಲ್ಲಿ ಉದ್ಯಮದಿಂದ ಪ್ರತಿಕ್ರಿಯೆ ಮತ್ತು ಮೆಚ್ಚುಗೆ ಚನ್ನಾಗಿದೆ ಎಂದು ತಿಳಿಸಿದರು

ವಿನುತಾ ಹವಾಲ್ದಾರ್ ಕರ್ನಾಟಕ ಟಿವಿ ಬೆಂಗಳೂರು

- Advertisement -

Latest Posts

Don't Miss