Wednesday, November 26, 2025

Latest Posts

ಅಂಗಾಗ ದಾನ ಮಾಡಲು ಸಂಕಲ್ಪ ; ಸಿಎಂ ಬಸವರಾಜ ಬೊಮ್ಮಾಯಿ

- Advertisement -

www.karnatakatv.net : ಉಡುಪಿ: ಅಂಗಾಂಗ ದಾನ  ಮಾಡುವುದು ಶ್ರೇಷ್ಟವಾದದ್ದು, ಇಂದು ವಿಶ್ವ ಅಂಗಾಗ ದಾನ ದಿನವಾಗಿರುವದರಿಂದ, ನಾನು ಅಂಗಾಂಗ ದಾನಕ್ಕೆ ಸಹಿ ಹಾಕುತ್ತಿದ್ದೇನೆ. ಇತರರು ಕೂಡ ಅಂಗಾಂಗ ದಾನಕ್ಕೆ ಸಹಿ ಹಾಕಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಕರೆ ನೀಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅಂಗಾಂಗ ಕಸಿ ಮಾಡುವ ತಂತ್ರಜ್ಞಾನ ಬಂದಿದೆ. ಅಂಗಾಂಗ ದಾನ ಮಾಡುವುದರಿಂದ ಇನ್ನೊಬ್ಬರ ಜೀವ ಉಳಿಸಬಹುದು. ಅಂಗಾಂಗ ದಾನ ಮಾಡುವುದರಿಂದ ನಮ್ಮಿಂದ ಒಂದು ಜೀವ ಉಳಿಯುತ್ತದೆ ಎನ್ನುವುದಾದರೆ ಯಾಕೆ ಮಾಡಬಾರದು. ಈ ನಿಟ್ಟಿನಲ್ಲಿ ಎಲ್ಲರೂ ಸಂಕಲ್ಪ ಮಾಡೋಣ, ನಮ್ಮ ಕಿಡ್ನಿ, ಹಾರ್ಟ್, ಲಿವರ್ ನಮ್ಮ ಮರಣಾ ನಂತರ ಮತ್ತೊಬ್ಬರಿಗೆ ಜೀವ ನೀಡುತ್ತದೆ. ಹಾಗಾಗಿ ಜನರು ಅಂಗಾಂಗ ದಾನಕ್ಕೆ ಮುಂದಾಗಬೇಕು.

ಇಂದು ವಿಶ್ವ ಅಂಗಾಂಗ ದಾನ ದಿನದ ಹಿನ್ನೆಲೆಯಲ್ಲಿ ನಾನು ಅಂಗಾಂಗ ದಾನಕ್ಕೆ ಸಹಿ ಹಾಕಲು ನಿರ್ಧರಿಸಿದ್ದೇನೆ. ಜನರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ಕೆ ಮುಂದಾಗಿ ಎಂದು ಸಿಎಂ ಮನವಿ ಮಾಡಿಕೊಂಡರು.

ಕರ್ನಾಟಕ ಟಿವಿ ಉಡುಪಿ

- Advertisement -

Latest Posts

Don't Miss