Sunday, December 22, 2024

Latest Posts

ಕೋವಿಡ್ ಸಂಕಷ್ಟದ ನಡುವೆ ದೇಶಿ ವಿಮಾನ ದರ ಹೆಚ್ಚಳ

- Advertisement -

www.karnatakatv.net : ಕೊರೊನಾ ಮಹಾಮಾರಿ ಇಂದ ದೇಶದಲ್ಲಿ ಎಲ್ಲವು ನಷ್ಟದಲ್ಲಿ ಇದ್ದು, ವಿಮಾನ ದರವನ್ನು ಮಾತ್ರ ಹೆಚ್ಚಳ ಮಾಡಲಾಗಿದೆ.  ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ದರಗಳ ಮೇಲಿನ ಮಿತಿಯನ್ನು ಶೇ. 9.83 ರಿಂದ ಶೇ. 12.82ಕ್ಕೆ ಹೆಚ್ಚಿಸಿದೆ. ಕೊರೋನಾ ದಿಂದ  ಎರಡು ತಿಂಗಳ ಲಾಕ್‌ಡೌನ್ ನಂತರ, ಮೇ 25, 2020 ರಂದು ವಿಮಾನ ಸೇವೆಗಳನ್ನು ಪುನರಾರಂಭಿಸಿದಾಗ ವಿಮಾನಯಾನದ ಅವಧಿಯ ಆಧಾರದ ಮೇಲೆ ಕೇಂದ್ರ ಸರ್ಕಾರ ಟಿಕೆಟ್ ದರಗಳ ಮೇಲೆ ನಿಯಂತ್ರಣ ಹೇರಿತ್ತು.

ಕೊರೋನಾ ವೈರಸ್ ಸಂಬಂಧಿತ ಪ್ರಯಾಣ ನಿರ್ಬಂಧಗಳಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿಮಾನಯಾನ ಸಂಸ್ಥೆಗಳಿಗೆ ಸಹಾಯ ಮಾಡಲು ಕನಿಷ್ಠ ದರ ನಿಗದಿಪಡಿಸಲಾಗಿದೆ.

ಆಗಸ್ಟ್ 12, 2021 ರ ಆದೇಶದಲ್ಲಿ, ವಿಮಾನಯಾನ ಸಚಿವಾಲಯವು 40 ನಿಮಿಷಗಳ ಅವಧಿಯ ವಿಮಾನ ಪ್ರಯಾಣದ ದರದ ಮಿತಿಯನ್ನು ರೂ 2,600 ರಿಂದ ರೂ 2,900 ಕ್ಕೆ ಹೆಚ್ಚಿಸಿದೆ – ಇದು ಶೇಕಡಾ 11.53 ರಷ್ಟು ಹೆಚ್ಚಳವಾಗಿದೆ. ಇನ್ನು 40 ನಿಮಿಷಗಳ ಅವಧಿಯ ವಿಮಾನ ಪ್ರಮಾಣ ದರದ ಮೇಲಿನ ಮಿತಿಯನ್ನು ಅನ್ನು ಶೇ. 12.82 ರಷ್ಟು ಹೆಚ್ಚಿಸಿ 8,800 ರೂ. ಅಂತೆಯೇ, 40-60 ನಿಮಿಷಗಳ ನಡುವಿನ ಅವಧಿಯ ವಿಮಾನ ಪ್ರಯಾಣದ ದರವನ್ನು ಈಗ ರೂ 3,300 ರ ಬದಲಾಗಿ ರೂ 3,700ಕ್ಕೆ ಹೆಚ್ಚಿಸಲಾಗಿದೆ ಎಂದು ಸಚಿವಾಲಯ ಆದೇಶದಲ್ಲಿ ತಿಳಿಸಿದೆ.

- Advertisement -

Latest Posts

Don't Miss