www.karnatakatv.net : ಬೆಂಗಳೂರು : ತಾನು ಹೇಳಿದ ಒಂದೇ ಒಂದು ಸುಳ್ಳಿನಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಡ್ರೋಣ್ ಪ್ರತಾಪ್ ಇದೀಗ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾನೆ. ಹೌದು, ಡ್ರೋಣ್ ಪ್ರತಾಪ್ ಜೀವನಗಾಥೆ ಇದೀಗ ಸಿನಿಮಾ ಆಗಿ ತೆರೆ ಮೇಲೆ ಬರಲಿದೆ. ಚಿತ್ರ ನಿರ್ಮಾಣಕ್ಕೆ ಮುಂದಾಗಿರೋ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ‘ಡ್ರೋಣ್ ಪ್ರಥಮ್’ ಅಂತ ಸಿನಿಮಾಕ್ಕೆ ಟೈಟಲ್ ಇಟ್ಟಿದ್ದಾರೆ.
ಡ್ರೋಣ್ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರ ಮಾಡೋ ಯೋಜನೆ ಹೊಂದಿದ್ದೇನೆ, ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ನಾನು ದೇಶವನ್ನು ಪ್ರತಿನಿಧಿಸಿ ಗೆದ್ದಿದ್ದೇನೆ ಎಂದೆಲ್ಲಾ ಸತ್ಯದ ತಲೆ ಮೇಲೆ ಹೊಡೆದ ಹಾಗೆ ಸುಳ್ಳು ಹೇಳಿ ನಂಬಿಸಿದ್ದ ಪ್ರತಾಪ್ ದೇಶಾದ್ಯಂತ ಸೆನ್ಸೇಷನ್ ಸೃಷ್ಟಿಸಿ ಅಪಾರ ಅಭಿಮಾನಿ ಬಳಗವನ್ನೇ ಗಿಟ್ಟಿಸಿಕೊಂಡಿದ್ದ. ಕೊನೆಗೆ ಸತ್ಯಾಂಶ ಬೆಳಕಿಗೆ ಬಂದು ಡ್ರೋಣ್ ಪ್ರತಾಪ್ ನಗೆಪಾಟಲಿಗೀಡಾಗಿದ್ದ. ಸದ್ಯಕ್ಕೆ ಚಿತ್ರದ ಟೈಟಲ್ ಅಷ್ಟೇ ಫೈನಲ್ ಆಗಿದ್ದು, ಚಿತ್ರೀಕರಣ, ಮುಹೂರ್ತದ ಕುರಿತೂ ಇನ್ನೂ ದಿನಾಂಕ ನಿಗದಿಯಾಗಿಲ್ಲ ಅಂತ ಪ್ರಥಮ್ ತಿಳಿಸಿದ್ದಾರೆ.
ಚಿತ್ರಕ್ಕಾಗಿ ಪ್ರಥಮ್ 4 ತಿಂಗಳುಗಳ ಕಾಲ ಡ್ರೋಣ್ ಪ್ರತಾಪ್ ಕುರಿತಾಗಿ ಸಾಕಷ್ಟು ಮಾಹಿತಿ ಸಂಗ್ರಹಿಸಲಿದ್ದಾರೆ, ಈಗಾಗಲೇ ಆತನ ಎಲ್ಲಾ ಬಂಡಲ್ ವಿಡಿಯೋಗಳನ್ನೂ ಪ್ರಥಮ್ ಸಾಕಷ್ಟು ಬಾರಿ ನೋಡೋ ಮೂಲಕ ಪ್ರತಾಪನ ಮ್ಯಾನರಿಸಂ ಸ್ಟಡಿ ಮಾಡ್ತಿದ್ದಾರಂತೆ,
ರೀಲ್ ಬಿಟ್ಟು ರಿಯಲ್ ಸ್ಟಾರ್ ಅಂತ ಬಿಂಬಿಸಿಕೊಳ್ಳೋ ಪ್ರಯತ್ನ ಮಾಡಿದ್ದ ಪ್ರಥಮ್ ಕೊನೆಗೆ ಕಾಮಿಡಿ ಪೀಸ್ ಆಗಿದ್ದಾನೆ. ಇದನ್ನೇ ಕಥಾವಸ್ತುವನ್ನಾಗಿ ಬಳಸಿಕೊಳ್ಳಲು ಹೊರಟಿರೋ ಒಳ್ಳೆ ಹುಡುಗ ಪ್ರಥಮ್ ಶೀಘ್ರವೇ ಬಂಡಲ್ ಪ್ರತಾಪನ ಕಥೆಯನ್ನು ಬೆಳ್ಳಿ ತೆರೆಗೆ ತರಲಿದ್ದಾರೆ.
ಕರ್ನಾಟಕ ಟಿವಿ – ಬೆಂಗಳೂರು