Wednesday, October 15, 2025

Latest Posts

ಹುಬ್ಬಳ್ಳಿ ಹುಡುಗನ ಡಿಫ್ರೆಂಟ್ ಹುಟ್ಟು ಹಬ್ಬ

- Advertisement -

www.karnatakatv.net :ಹುಬ್ಬಳ್ಳಿ: ಹುಟ್ಟು ಹಬ್ಬ ಬಂದರೆ ಸಾಕು, ಎಲ್ಲಿಲ್ಲದ ಆಡಂಬರ ಮಾಡಿಕೊಂಡು ಸಾಕಷ್ಟು ದುಡ್ಡು ಹಾಳು ಮಾಡುತ್ತಾರೆ, ಆದರೆ ಹುಬ್ಬಳ್ಳಿಯಲೋಬ್ಬ ಯುವಕ ತನ್ನ ಜನ್ಮದಿನವನ್ನು ಭಿಕ್ಷುಕನ ಜೊತೆ ಆಚರಿಸಿಕೊಳ್ಳುವ ಮೂಲಕ ಮಾದರಿಯಾಗಿದ್ದಾನೆ.‌    

ಹುಬ್ಬಳ್ಳಿಯ ಅಮರಗೋಳದ ನಿವಾಸಿಯಾದ ಗೀರಿಶ ಜಾಡರ ಎನ್ನುವ ವ್ಯಕ್ತಿ, ತಮ್ಮ ಹುಟ್ಟು ಹಬ್ಬದ ಅಂಗವಾಗಿ ಈ ಭಿಕ್ಷುಕನಿಗೆ  ಕಟೀಂಗ್ ಮಾಡಸುವುದರ ಜೊತೆಗೆ ಹೊಸ ಬಟ್ಟೆ, ಹಾಗೂ ಊಟ ಮಾಡಿಸಿ ಸಾಮಾನ್ಯ ಜನರಂತೆ ಹೊಸ ಲುಕ್ ನೀಡಿ ಮಾನವೀಯತೆ ಮೆರೆದ್ರು.

ಈ ಹಿಂದೆ ಗಿರೀಶ ತಮ್ಮ ಹುಟ್ಟು ಹಬ್ಬಕ್ಕೆ ಅನಾಥ ಆಶ್ರಮ, ವೃದ್ಧಾಶ್ರಮಕ್ಕೆ ಹೋಗಿ ಅಂಧ ಮಕ್ಕಳ ಶಾಲೆ, ಹೀಗೆ ಹೋಗಿ ಆಚರಣೆ ಮಾಡಿಕೊಳ್ಳುತ್ತಿದ್ರು.  ಆದ್ರೆ ಈ ವರ್ಷ ಕೊರೊನಾ ಇದ್ದಿದ್ದರಿಂದ ಭಿಕ್ಷುಕನ ಜೊತೆ ಹುಟ್ಟು ಹಬ್ಬ ಆಚರಣೆ ಮಾಡಿಕೊಂದ್ರು. ಇದನ್ನು ನೋಡಿ ಕಟಂಗ್ ಶಾಪ್ ಮಾಲೀಕರು ಸಹ ಶ್ಲಾಘನೀಯ ವ್ಯಕ್ತಪಡಿಸಿದ್ರು.

ಕರ್ನಾಟಕ ಟಿವಿ- ಹುಬ್ಬಳ್ಳಿ

- Advertisement -

Latest Posts

Don't Miss