ಅಕ್ಟೋಬರ್ ನಲ್ಲಿ 3ನೇ ಅಲೆ ಪಕ್ಕಾ…!

www.karnatakatv.net : ಬೆಂಗಳೂರು : ಅಕ್ಟೋಬರ್ ನಲ್ಲಿ  ಕೊರೋನಾ 3ನೇ ಅಲೆ ಹಾವಳಿ ಶುರುವಾಗಲಿದೆ ಹೀಗಾಗಿ ಜನರು ಎಷ್ಟು ಸಾಧ್ಯವೋ ಅಷ್ಟು ಎಚ್ಚರಿಕೆಯಿಂದರಬೇಕು ಅಂತ ಕೋವಿಡ್ ಟಾಸ್ಕ್ ಫೋರ್ಸ್ ಸದಸ್ಯ ಡಾ.ದೇವಿ ಶೆಟ್ಟಿ ಕರೆ ನೀಡಿದ್ದಾರೆ. ಇನ್ನು ಮುಂದಿನ ತಿಂಗಳು ಗಣೇಶೋತ್ಸವ ಬರುತ್ತಿದ್ದು ಜನರು ಅತ್ಯಂತ ಜವಾಬ್ದಾರಿಯುತವಾಗಿ ವರ್ತಿಸಬೇಕು. ಇನ್ನು ಸಾರ್ವಜನಿಕವಾಗಿ ಗುಂಪುಗೂಡಿ ಆಚರಿಸೋ ಹಬ್ಬಗಳಿಗೆ ಅನುಮತಿ ನೀಡೋದು ಬಿಡೋದ ಸರ್ಕಾರಕ್ಕೆ ಬಿಟ್ಟ ವಿಚಾರ. ನನ್ನ ಪ್ರಕಾರ ಗಣೇಶೋತ್ಸವವಲ್ಲದೆ ಇತರೆ ಕಾರ್ಯಕ್ರಮಗಳ ಆಚರಣೆಗೆ ಅನುಮತಿ ನೀಡಿದ್ರೂ ಅದು ಅಪಾಯಕಾರಿಯೇ ಅಂತ ಡಾ. ದೇವಿ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. 

ಇನ್ನು ಒಗ್ಗಟ್ಟು ಹಾಗೂ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರೋ ಗಣೇಶೋತ್ಸವ ಆಚರಣೆ ಕುರಿತು ಈಗಾಗಲೇ ಪರ ವಿರೋಧ ವ್ಯಕ್ತವಾಗ್ತಿದೆ. ಅಲ್ಲದೆ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿಗರೇ ಗಣೇಶೋತ್ಸವಕ್ಕೆ ಅನುಮತಿ ನೀಡಲು ಮನವಿ ಮಾಡ್ತಿರೋದು  ಬೊಮ್ಮಾಯಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದೆ.

ಕರ್ನಾಟಕ ಟಿವಿ – ಬೆಂಗಳೂರು

About The Author