Friday, July 11, 2025

Latest Posts

ರಕ್ಷಣಾ ಇಲಾಖಾ ಅಧಿಕಾರಿಗಳಿಂದ ಮಕ್ಕಳ ರಕ್ಷಣೆ

- Advertisement -

www.karnatakatv.net : ರಾಯಚೂರು : ಜಿಲ್ಲೆಯಲ್ಲಿ  ಬೆಳ್ಳಂಬೆಳಗ್ಗೆ ಮಕ್ಕಳ  ರಕ್ಷಣ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಲಾಗಿದೆ.

ಕೂಲಿ ಕೆಲಸಕ್ಕೆ ಎಂದು ಸಾಗಿಸ್ತಿದ್ದ 59  ಮಕ್ಕಳನ್ನು ರಕ್ಷಣಾ ಇಲಾಖಾ ಅಧಿಕಾರಿಗಳು ರಕ್ಷಣೆ ಮಾಡಿದ್ರು. ರಾಯಚೂರು ತಾಲೂಕು ಹಾಗೂ ಸಿರವಾರ ಪಟ್ಟಣ ದೇವದುರ್ಗ ತಾಲೂಕಿನಲ್ಲಿ ಕೂಲಿ ಕೆಲಸಕ್ಕೆಂದು  ಮಕ್ಕಳನ್ನ ಗೂಡ್ಸ್ ವಾಹನಗಳಲ್ಲಿ ತೆರಳುವ ವೇಳೆ ದಾಳಿ ಮಾಡಿ  ಮಕ್ಕಳನ್ನು ರಕ್ಷಣೆ ಮಾಡಿದ್ರು. ೫ ಗೂಡ್ಸ್ ಗಾಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿರುವ 59 ಅಧಿಕ ಮಕ್ಕಳನ್ನು  ಮಕ್ಕಳ ರಕ್ಷಾಣ ಅಧಿಕಾರಿ ಮಂಜುನಾಥ್  ಅವರು ಪೋಷಕರಿಗೆ ಹಸ್ತಾಂತರ ಮಾಡಿದರು.   5  ವಾಹನಗಳನ್ನ ಜಪ್ತಿ ಮಾಡಿ ಸಿರವಾರ ಠಾಣೆಯಲ್ಲಿ ಮಕ್ಕಳ ಕಳ್ಳ ಸಾಗಾಣಿಕೆ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ.

ಅನೀಲ್ ಕುಮಾರ್, ಕರ್ನಾಟಕ ಟಿವಿ -ರಾಯಚೂರು

- Advertisement -

Latest Posts

Don't Miss