Friday, December 13, 2024

Latest Posts

ಗ್ರಾಮ ಪಂಚಾಯತಿ ಎದುರು ನೇಣಿಗೆ ಕೊರಳೊಡ್ಡಿ ಹೈಡ್ರಾಮಾ

- Advertisement -

www.karnatakatv.net : ತುಮಕೂರು: ಕ್ರಷರ್ ನಿಂದಾಗುತ್ತಿರುವ ತೊಂದರೆ ವಿರುದ್ದ ಪ್ರತಿಭಟಿಸುತಿದ್ದ ಗ್ರಾಮಸ್ಥರು ಗ್ರಾಮ ಪಂಚಾಯತಿ ಎದುರು ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಹೈಡ್ರಾಮಾ ಮಾಡಿದ ಘಟನೆ ನಡೆದಿದೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನಿಡಗಲ್ ಗ್ರಾಮ ಪಂಚಾಯತಿ ಎದುರು ಈ ಪ್ರಹಸನ ಜರುಗಿದೆ.

ಹುಲಿಯೂರುದುರ್ಗ ಹೋಬಳಿಯ ಪಿ.ಎಚ್ ಹಳ್ಳಿ ಸರ್ವೆ ನಂಬರ್ 82 ರಲ್ಲಿ ನಡೆಯುತ್ತಿರುವ ಬಾಲಾಜಿ ಸ್ಟೋನ್ ಕ್ರಷರ್, ಕೃಷ್ಣ ಸ್ಟೋನ್ ಕ್ರಷರ್ ನಿಂದ ಸಾರ್ವಜನಿಕರಿಗೆ ತೊಂದರೆಯಾಗುತಿತ್ತು. ಈ ಹಿನ್ನೆಲೆಯಲ್ಲಿ ವಿ.ಕೆ.ಗೌಡರ ದೊಡ್ಡಿ, ಪಿ.ಹೊನ್ನಮಾಚನಹಳ್ಳಿ, ರಾಜಪ್ಪನ್ನ ದೊಡ್ಡಿ, ಮುನಿಯಮ್ಮನ ಪಾಳ್ಯದ ಜನರು ನಿಡಸಾಲೆ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿದ್ದಾರೆ. ಜತೆಗೆ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಯ ಹೈಡ್ರಾಮಾ ಸೃಷ್ಟಿಸಿದ್ದಾರೆ.

ದರ್ಶನ್ ಕೆಡಿಆರ್, ಕರ್ನಾಟಕ ಟಿವಿ –ತುಮಕೂರು

- Advertisement -

Latest Posts

Don't Miss