- Advertisement -
ಹಾವೇರಿಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ರು. ಶಾಲೆಯೊಂದಕ್ಕೆ ಭೇಟಿ ನೀಡಿದ ಸಿಎಂ, ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸಿದ್ರು.
ಜಿಲ್ಲೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಇಂದು ಕೆರೆ ತುಂಬಿಸೋ ಯೋಜನೆ ಸೇರಿದಂತೆ ನಾನಾ ಅಭಿವೃದ್ಧಿ ಯೋಜನಗೆಳಿಗೆ ಚಾಲನೆ ನೀಡಿದ್ರು. ತಡಸ ಗ್ರಾಮದಲ್ಲಿ ಕಾರ್ಯಕ್ರಮ ಮುಗಿಸಿ ತೆರಳಿದ ಬಳಿಕ ಶಿಗ್ಗಾವಿಯ ಅರಟಾಳ ದುಂಡಸಿ ಗ್ರಾಮದ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಗೆ ಭೇಟಿ ನೀಡಿದ್ರು. ಈ ವೇಳೆ ಸಿಎಂ ಮಕ್ಕಳೊಂದಿಗೆ ಮಾತುಕತೆ ನಡೆಸಿದ್ರು. ಶಾಲೆಗೆ ಆಗಮಿಸಿದ ಅವರನ್ನ ಬರಮಾಡಿಕೊಳ್ಳುವ ವೇಳೆ ಪಕ್ಕದಲ್ಲಿ ನಿಂತಿದ್ದ ವಿದ್ಯಾರ್ಥಿನಿಯೊಬ್ಬಳ ಜೊತೆ ಸಿಎಂ ಮಾತಿಗಿಳಿದ್ರು, ಯಾವ ಕ್ಲಾಸ್ ನಲ್ಲಿ ಓದುತ್ತಿದ್ದೀಯಮ್ಮಾ, ಕ್ಲಾಸ್ ಶುರುವಾಗಿವೆಯಾ, ಸರಿಯಾಗಿ ಓದಮ್ಮಾ ಅಂತ ವಿದ್ಯಾರ್ಥಿನಿಯೊಂದಿಗೆ ಸಂಭಾಷಣೆ ಮಾಡಿದ್ದು ವಿಶೇಷವಾಗಿತ್ತು.
- Advertisement -