Monday, December 23, 2024

Latest Posts

ಬಂಡಾಯಕೋರರು ಯಾರು ಕೂಡ ಜಯ ಸಾಧಿಸಲ್ಲ; ಜಗದೀಶ್ ಶೆಟ್ಟರ್…!

- Advertisement -

www.karnatakatv.net :ಹುಬ್ಬಳ್ಳಿ: ನಗರದ ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆ ಸೇವಾಸದನದ ಮತಗಟ್ಟೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕುಟುಂಬ ಸಮೇತವಾಗಿ ಬಂದು ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾವಣೆ ಮಾಡಿದರು.

ಮತ ಚಲಾಯಿಸಿದ ಬಳಿಕ ಮಾತನಾಡಿ, ನಾನು ಮತದಾನ ಮಾಡಿರುವೆ, ಸಕ್ರೀಯವಾಗಿ ನಾನು ಭಾಗವಹಿಸಿ ಪ್ರಚಾರ ಮಾಡಿರುವೆ. ಜನರಿಂದ ಸಾಕಷ್ಟು ಉತ್ತಮ ಪ್ರತಿಕ್ರಿಯೆ ಇದೆ. 82 ಸ್ಥಾನಗಳಲ್ಲಿ 60ಕ್ಕೂ ಹೆಚ್ಚು ಸ್ಥಾನಗಳನ್ನ ಗೆಲ್ಲುತ್ತೇವೆ. ಟಿಕೇಟ್ ಆಕ್ಷಾಂಕಿಗಳ ಮಧ್ಯೆ ಸಾಕಷ್ಟು ಪೈಪೋಟಿ ಇದ್ದು, 700 ಕ್ಕೂ ಹೆಚ್ಚು ಜನರು ಆಕ್ಷಾಂಕಿಗಳು ಇದ್ದರು. ಕೆಲವು ಕಡೆ ಬಂಡಾಯಕೋರರು ಸ್ಪರ್ಧೆ ಮಾಡಿದ್ದಾರೆ. ಅವರ ವಿರುದ್ದ ಕ್ರಮ‌ಕೈಗೊಂಡಿದ್ದೇವೆ ಎಂದರು.

ಬಂಡಾಯಗಾರರಿಗೆ ಜನರು ಬೆಂಬಲ ನೀಡಿಲ್ಲ. ಬೆಲೆ ಏರಿಕೆ ಬೇರೆ ಬೇರೆ ಸರ್ಕಾರ ಇದ್ದಾಗಲೂ ಆಗಿದೆ. ಬೆಲೆ ಏರಿಕೆ ಈ ಚುನಾವಣೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಲ್ಲ.‌ ಗೂಂಡಾಗಿರಿ, ಒತ್ತಡ ಹಾಕಿದರು ಬಂಡಾಯಗಾರರು ಗೆಲುವು ಸಾಧಿಸಲ್ಲ, ಕೆಲವು ಅಭ್ಯರ್ಥಿಗಳಿಗೆ ಜೈಲಿನಿಂದ ಬೆದರಿಕೆ ಬಂದಿದ್ದು, ಆ ಕುರಿತು ಯಾರು ದೂರು ನೀಡಿಲ್ಲ, ದೂರು ಬಂದರೆ ಆ ಬಗ್ಗೆ ಕ್ರಮ‌ ಕೈಗೊಳ್ಳುತ್ತವೆ ಎಂದು ಭರವಸೆ ನೀಡಿದರು.

ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ವಿಚಾರವಾಗಿ ಮಾತನಾಡಿ, ಪಕ್ಷದ ನಿರ್ಧಾರದಂತೆ ನಾವೂ ಮುಂದುವರೆಯುತ್ತೇವೆ. ಮುಂದಿನ ಚುನಾವಣೆ ಇನ್ನೂ ದೂರ ಇದೆ.  ಹಿರಿಯರನ್ನು ಕಡೆಗಣಿಸಿದ ಬಗ್ಗೆ ನಾವೂ ಪಕ್ಷದ ಚೌಕಟ್ಟಿನೊಳಗೆ ಮಾತನಾಡುತ್ತೇವೆ. ಬೊಮ್ಮಾಯಿ ಸರ್ಕಾರ ಬಂದು ಒಂದು ತಿಂಗಳಾಯ್ತು. ಒಂದು ತಿಂಗಳ ಅವಧಿಯಲ್ಲಿ ಪಾಸ್, ಫೇಲ್ ಅನ್ನೋಕಾಗಲ್ಲ. ಬೊಮ್ಮಾಯಿ ಅವರಿಗೆ ಅಮಿತ್ ಶಾ ಸರ್ಟಿಫಿಕೆಟ್ ಕೊಟ್ಟಿದ್ದು, ಸಂತಸದ ವಿಷಯ ಎಂದರು.

ಕರ್ನಾಟಕ ಟಿವಿ – ಹುಬ್ಬಳ್ಳಿ

- Advertisement -

Latest Posts

Don't Miss