Monday, December 23, 2024

Latest Posts

ಪಾಲಿಕೆ ಪಟ್ಟ ಪಡೆಯಲು ಹೆಣಗಾಡುತ್ತಿರುವ ಬಿಜೆಪಿ…!

- Advertisement -

www.karnatakatv.net :ಹುಬ್ಬಳ್ಳಿ: ನಗರದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನಾಯಕರು ಎಡವಿದ್ದಾರೆ. ಹ್ಯಾಟ್ರಿಕ್ ಗೆಲುವಿಗಾಗಿ ಮಾಡಿದ್ದ ಬಿಜೆಪಿ ಪ್ಲ್ಯಾನ್ ಉಲ್ಟಾ ಆಗಿದೆ.

ವಾರ್ಡ್ ವಿಂಗಡಣೆ ಮಾಡಿದ್ದರೂ ಸಹ ಜನ ಬಿಜೆಪಿಗೆ ಮತ ಹಾಕಿಲ್ಲ. ತಮಗೆ ಬೇಕಾದ ಹಾಗೆ ವಾರ್ಡ್ ವಿಂಗಡಣೆ ಮಾಡಿದ್ದಾರೆಂದು ಕಾಂಗ್ರೆಸ್ ಆರೋಪಿಸಿತ್ತು‌. ಆರೋಪಕ್ಕೆ ಕ್ಯಾರೆ ಎನ್ನದೆ ಬಿಜೆಪಿ ಚುನಾವಣೆ ಎದುರಿಸಿತ್ತು. ದೊಡ್ಡ ದೊಡ್ಡ ನಾಯಕರಿದ್ದರೂ ಮ್ಯಾಜಿಕ್ ನಂಬರ್ 42 ತಲುಪುವಲ್ಲಿ ಬಿಜೆಪಿ ವಿಫಲವಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಒಬ್ಬ  ಶಾಸಕ ಇದ್ದರೂ ಸಹ 10 ಹೆಚ್ಚುವರಿ ವಾರ್ಡ್ ಗಳನ್ನು ಗೆಲ್ಲಲು ಕಾಂಗ್ರೆಸ್ ಗೆ ಸಾಧ್ಯವಾಗಿದೆ‌. ಆದರೆ ಬಿಜೆಪಿಯ ಪ್ರತಿಷ್ಠೆಯ ಕಣವಾಗಿದ್ದ ಪಾಲಿಕೆ ಚುನಾವಣೆ ಅತಂತ್ರವಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್,  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಹುಟ್ಟುರಾದ್ರೂ ಮ್ಯಾಜಿಕ್ ನಂಬರ್ ಮುಟ್ಟುವಲ್ಲಿ ಬಿಜೆಪಿ ವಿಫಲವಾಗಿದೆ.

ಬಿಜೆಪಿ ನಾಯಕರ ಸಮನ್ವಯ ಕೊರತೆ.‌ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಬೆಲ್ಲದ ಹಾಗೂ ಜಗದೀಶ್ ಶೆಟ್ಟರ್ ನಡುವಿನ ಶೀತಲ ಸಮರ ಹೆಚ್ಚು ಸ್ಥಾನಗಳನ್ನು  ಗೆಲ್ಲಲು ಕೇಸರಿ ಪಡೆ ಹೆಣಗಾಡುವಂತಾಗಿದೆ.

ಬಿಜೆಪಿ 3 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದರೂ 39 ಸೀಟ್ ಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ. ಮತ್ತೆ ಓರ್ವ ಪಕ್ಷೇತರ ಅಭ್ಯರ್ಥಿ ಮೇಲೆ ಕಮಲ ಡಿಪೆಂಡ್ ಆಗುವಂತಾಗಿದ್ದು, ನಾಯಕರ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ. ಇದು ಮೇಯರ್ ಹಾಗೂ ಉಪಮೇಯರ್ ಆಯ್ಕೆ ಮೇಲೂ ಮತ್ತೆ ವ್ಯತಿರಿಕ್ತ ಪರಿಣಾಮ ಬಿಳುವ ಸಾಧ್ಯತೆ ಹೆಚ್ಚಾಗಿದೆ.

ಕರ್ನಾಟಕ ಟಿವಿ- ಹುಬ್ಬಳ್ಳಿ

- Advertisement -

Latest Posts

Don't Miss