Thursday, December 12, 2024

Latest Posts

ಗುಬ್ಬಿ ಠಾಣೆಯ ಪಿಎಸ್ಐ ಅಮಾನತು..!

- Advertisement -

www.karnatakatv.net :ತುಮಕೂರು:  ಜಿಲ್ಲೆಯ ಗುಬ್ಬಿ ಠಾಣೆಯ ಪಿಎಸ್ಐ ಜ್ಞಾನಮೂರ್ತಿಅವರನ್ನು ಅಮಾನತುಗೊಳಿಸಲಾಗಿದೆ.   ಶವ ಸಾಗಿಸದ ಚಾಲಕನಿಂದ ಫೋನ್ ಪೇ ಮೂಲಕ ಹಣ ಪಡೆದ ಕಾರಣ ಅವರನ್ನು  ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವಾರ ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಎಂ ಎಚ್ ಪಟ್ಟಣದ ಬಳಿ ಲಾರಿ ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಬೆಂಗಳೂರು ಕಡೆಯಿಂದ ಬಂದ ಮ್ಯಾಕ್ಸಿಕ್ಯಾಬ್ ಚಾಲಕ  ಶವ ಸಾಗಿಸಲು ಒಪ್ಪದೆ ಇದ್ದ ಕಾರಣ ಸಿಟ್ಟಾದ ಪಿಎಸ್ಐ ಚಾಲಕನ ಮೇಲೆ ದರ್ಪ ತೋರಿ ಕಿರುಕುಳ ನೀಡಿದ ಆರೋಪ ಕೇಳಿ ಬಂದಿತ್ತು.

ಇಷ್ಟೇ ಅಲ್ಲದೆ ವಶ ಪಡಿಸಿಕೊಂಡ ಬೊಲೆರೋ ಮಾಕ್ಸಿ ಕ್ಯಾಬ್ ಬಿಡುಗಡೆಗೆ ಚಾಲಕನಿಗೆ 20 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಚಾಲಕನಿಂದ 7 ಸಾವಿರ ರೂ ಹಣವನ್ನು ಫೋನ್ ಪೇ ಮೂಲಕ ಪಿ.ಎಸ್‍.ಐ ತಮ್ಮ  ಜೀಪ್ ಚಾಲಕ ಕರಿಯಪ್ಪ ಅವರ ಮೊಬೈಲ್ ನಂಬರಿಗೆ ಹಣ ವರ್ಗಾವಣೆ ಮಾಡಿಸಿಕೊಂಡದ್ದರು. ಪಿ.ಎಸ್‍.ಐ ದೌರ್ಜನ್ಯ ಖಂಡಿಸಿ ರೈತರು ಬೆಳೆದ ತರಕಾರಿ ಸಾಗಿಸುವ  ಚಾಲಕರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದರು.  ಈ ಸಂಧರ್ಭದಲ್ಲಿ ಸಬ್ ಇನ್ಸ್ಪೆಕ್ಟರ್ ಜ್ಞಾನ ಮೂರ್ತಿ ಅವರ ಮೇಲೆ ಸಾರ್ವಜನಿಕರು ಮಾಡಿದ್ದ ಆರೋಪವನ್ನ ಗಂಭೀರವಾಗಿತ್ತು ಜಿಲ್ಲಾ ಪೊಲೀಸ್ ಇಲಾಖೆ. ಈ ಬಗ್ಗೆ ತನಿಖೆ ಮಾಡಿ ವರದಿ ನೀಡುವಂತೆ ಶಿರಾ ಡಿ ವೈ ಎಸ್ಪಿ ಕುಮಾರಪ್ಪ ಅವರಿಗೆ ಸೂಚನೆ ನೀಡಲಾಗಿತ್ತು.

ಈ ಹಿಂದೆ ಎಸ್ಪಿಯಾಗಿದ್ದ ಕೋನಾ ವಂಶಿ ಕೃಷ್ಣ ಅವರು ವರ್ಗಾವಣೆಗೂ ಮುನ್ನ 15 ದಿನಗಳ ಹಿಂದೆ ಜೂಜು ದಂಧೆಗಳು ಎಥೇಚ್ಚಾಗಿ ನಡೆಯುತ್ತಿವೆ. ಇದಕೆಲ್ಲಾ ಸ್ಥಳೀಯ ಸಬ್ಇನ್ಸ್ಪೆಕ್ಟರ್ ಜ್ಞಾನ ಮೂರ್ತಿ, ವೃತ್ತ ನಿರೀಕ್ಷಕರಾದ ರಾಮಕೃಷ್ಣ ಹಾಗೂ ಕೆಲವು ಫೋಲಿಸರು ಶಾಮೀಲಾಗಿರುವ ಬಗ್ಗೆ ವರದಿ ಸಿಕಿತ್ತು. ಅದರೆ ಅಂದಿನ ಎಸ್ಪಿಯಾಗಿದ್ದ ಕೋನಾ ವಂಶಿ ಕೃಷ್ಣ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ವರ್ಗಾವಣೆ ಯಾದರು. ನಂತರ ರಾಹುಲ್ ಕುಮಾರ್ ಶಹಾಪುರ್ ವಾಡ್ ಅಧಿಕಾರಿ ವಹಿಸಿಕೊಂಡರು. ಇಲಾಖೆಯನ್ನು ಜನ ಸ್ನೇಹಿ ಇಲಾಖೆಯನ್ನಾಗಿ ಮಾಡಲು ಶ್ರಮಿಸುತ್ತಿದ್ದರು. ಕೆಳ ಹಂತದ ಅಧಿಕಾರಿಗಳು ಇಲಾಖೆಗೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದರು. ತುಮಕೂರು ನಗರ ಸೇರಿದಂತೆ ಹಲವು ಕಡೆ ಖಾಕಿಗೆಗಳಿಗೆ ಬಿಸಿ ಮುಟ್ಟಿಸಿದ್ದರು.

ಜೂಜು ದಂಧೆಗಳನ್ನು ಮಟ್ಟಹಾಕುವಲ್ಲಿ ವಿಪಲವಾಗಿದ್ದು, ಚಾಲಕನಿಂದ ಫೋನ್ ಪೇ ಮೂಲಕ ಜೀಪ್ ಚಾಲಕನ ಮೂಲಕ 7000 ಸಾವಿರ ಹಣ ಪಡೆದ ಪ್ರಕರಣ ಸೇರಿದಂತೆ ಇತರೆಯ ಬಗ್ಗೆ ವರದಿ ನೀಡಿದ ಮೇರೆಗೆ  ಪಿ.ಎಸ್‍.ಐ ಜ್ಞಾನಮೂರ್ತಿ ಅವರನ್ನು ಅಮಾನತ್ತು ಮಾಡಿ ಆದೇಶಿಸಿದ್ದಾರೆ. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್ ವಾಡ್ ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಪೋಲಿಸ್ ಠಾಣೆಯ ವೀಕ್ಷಣೆ ಹೋದಾಗ, ಕ್ರೈಂ ಸಭೆಗಳಲ್ಲಿ  ಎಚ್ಚರಿಸಿಕೆ ನೀಡಿದ್ದರು ಅದನ್ನು ಕೇರ್ ಮಾಡದೆ ತಮ್ಮ ಉಪಟಳವನ್ನ ಮುಂದುವರಿಸಿರಿವವರಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ದರ್ಶನ್ ಕೆ.ಡಿ.ಆರ್,  ಕರ್ನಾಟ ಟಿವಿ –ತುಮಕೂರು

- Advertisement -

Latest Posts

Don't Miss