Thursday, December 12, 2024

Latest Posts

ಜನಪ್ರತಿನಿಧಿಗಳಿಗೆ ಅಕ್ಷರ ಜ್ಞಾನ ಮುಖ್ಯ..!

- Advertisement -

www.karnatakatv.net :ತುಮಕೂರು : ಸಾಕ್ಷರತೆ ಅನ್ನೋದು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಅಗತ್ಯ. ನಮ್ಮನಾಳುವ ಜನಪ್ರತಿನಿಧಿಗಳಿಗೆ ಅಕ್ಷರ ಜ್ಞಾನ  ಮುಖ್ಯ. ಆದ್ರೆ ಹಲವು ಅಕ್ಷರಸ್ಥರಲ್ಲದವರೂ ಕೂಡ ಜನಪ್ರನಿಧಿಗಳಾಗಿದ್ದಾರೆ.

ಜಿಲ್ಲೆಯ ಗುಬ್ಬಿ ತಾಲೂಕು ಗ್ರಾಮ ಪಂಚಾಯ್ತಿಯಲ್ಲಿ ಆಯ್ಕೆಯಾದ ಬಹುತೇಕರು ಅನಕ್ಷರಸ್ಥರಾಗಿದ್ದಾರೆ. ಇಂದೇ ಪಂಚಾಯ್ತಿಯಲ್ಲಿ 17 ಮಂದಿ ಅನಕ್ಷರಸ್ಥರನ್ನ ಗುರುತಿಸಲಾಗಿದೆ. ಈ ವಿಚಾರ ಬಲಿಗೆ ಬಂದಿದೆ. ಪಟ್ಟಣದ ಲಯನ್ಸ್ ಕ್ಲಬ್ ವತಿಯಿಂದ 55 ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಸಪ್ತಾಹ ಕಾರ್ಯಕ್ರಮದಲ್ಲಿ ಈ ವಿಷಯ ಗಮನ ಸೆಳೆಯಿತು. ಕೇವಲ ಸಹಿ ಹಾಕೋದು ಕಲಿತರೆ ಸಾಕ್ಷರತೆ ಹೊಂದಲು ಸಾಧ್ಯವಿಲ್ಲ. ಅವರಿಗೆ ಓದುವ ಬರೆಯುವ ಕೌಶಲ ಕಲಿಕೆ ನಡೆಯಬೇಕಿದೆ.  ಇದಕ್ಕೆ ಮನೆಯಲ್ಲಿ ವಿದ್ಯಾಂತರ ಸಹಕಾರ ಬಹಳ ಮುಖ್ಯವಾಗಿದೆ. ತಾಲೂಕಿನ ಗ್ರಾಮ ಪಂಚಾಯಿತಿಯಲ್ಲಿ ಗೆದ್ದಿರುವ  17 ಜನ ಜನ ಪ್ರತಿನಿಧಿಗಳು  ಅನಕ್ಷರಸ್ಥರಾಗಿದ್ದಾರೆ. ಅವರನ್ನ  ಸಾಕ್ಷರರನ್ನಾಗಿ ಮಾಡವುದು ನಮ್ಮ ಗುರಿ.  ಈ ಇವ್ರಿಗೆಲ್ಲ ಅಕ್ಷರ ಕಲಿಸುವುದು ಈ ವರ್ಷದ ವಿಚಾರವಾಗಿದೆ ಅನ್ನೋ ಪ್ರಸ್ತಾಪ ಮುಂದಿಟ್ವರು. ರಾಷ್ಟ್ರೀಯ ಸಾಕ್ಷರತಾ ತಾಲೂಕು ಸಂಯೋಜಕಾ ಅನಂತ ಕುಮಾರ್.

ದರ್ಶನ್ ಕೆ.ಡಿ.ಆರ್, ತುಮಕೂರು

- Advertisement -

Latest Posts

Don't Miss