ಹೇಳೋರಿಲ್ಲ, ಕೇಳೋರಿಲ್ಲ- ಸಿಕ್ಕ ಸಿಕ್ಕ ಕಡೆಯೆಲ್ಲಾ ಮರಳು ದಂಧೆ…!

www.karnatakatv.net :ಗದಗ: ಬೆಟ್ಟ ಗುಡ್ಡಗಳ ಮೇಲೆ ಕಣ್ಣಿಟ್ಟಿರೋ ಮರಳು ದಂಧೆಕೋರರು ಇದೀಗ ರೈತರ ಜಮೀನಿನ ಮೇಲೂ ತಮ್ಮ ಕಾಕದೃಷ್ಟಿ ಹಾಕಿದ್ದಾರೆ. ಹೀಗಾಗಿ ರೈತರು ತಮ್ಮ ಫಲವತ್ತಾದ ಜಮೀನನ್ನ ಕಳೆದುಕೊಂಡು ಕಂಗಾಲಾಗಿದ್ದಾರೆ. ಮರಳು ದಂಧೆಕೋರರಿಗೆ ಅಧಿಕಾರಿಗಳು ಕೂಡಾಸಾಥ್  ನೀಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಹೌದು.. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ‌ ಆದರಹಳ್ಳಿ ಹಾಗೂ ನಾದಿಗಟ್ಟಿ‌ ಗ್ರಾಮದಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಯಾವುದೇ ಅನುಮತಿ ಇಲ್ಲದೆ  ಜವಳು ಪ್ರದೇಶ ಹಾಗೂ ಬೆಟ್ಟಗುಡ್ಡಗಳಲ್ಲಿ‌‌ ಮರಳು ತೆಗೆದು ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ರೈತರ ಫಲವತ್ತಾದ ಜಮೀನಲ್ಲಿ ದೊಡ್ಡ ದೊಡ್ಡ ಹೊಂಡ ತೆಗೆದು ತಮ್ಮ ದಂಧೆ ಮುಂದುವರೆಸಿದ್ದಾರೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇನ್ನೂ ಈ ದಂಧೆಕೋರರಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೊಲೀಸರು ಸಾಥ್ ನೀಡಿದ್ದಾರೆ ಅಂತ ರೈತರು ಆರೋಪ ಮಾಡುತ್ತಿದ್ದಾರೆ.

ಕೂಡಲೇ ಸಂಬಂಧಪಟ್ಟ ಅಧಿಕಾರಗಳು ಪರಿಶೀಲನೆ ಮಾಡಿ ಮರಳುದಂಧೆಕೋರರ ಮೇಲೆ ಕ್ರಮ ಕೈಗೊಳ್ಳಬೇಕು ಅಂತ ರೈತರ ಒತ್ತಾಯ ಮಾಡುತ್ತಿದ್ದಾರೆ.

ಕರ್ನಾಟಕ ಟಿವಿ- ಗದಗ

About The Author