Thursday, December 12, 2024

Latest Posts

ಗುಜರಾತ್ ನ 24 ನೂತನ ಸಚಿವರ ಪದಗ್ರಹಣ

- Advertisement -

www.karnatakatv.net :ಗುಜರಾತ್ ನೂತನ ಸಿಎಂ ಭೂಪೇಂದ್ರ ಪಟೇಲ್ ಸಂಪುಟಕ್ಕೆ ಇವತ್ತು 24 ಶಾಸಕರು ಸಚಿವ ಸ್ಥಾನಕ್ಕೆ ಪದಗ್ರಹಣಗೊಂಡರು.

ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಆಚಾರ್ಯ ದೇವವ್ರತ್ 10 ಶಾಸಕರಿಗೆ ಸಂಪುಟ ಸಂಪುಟ ದರ್ಜೆ ಸಚಿವಾಗಿ ಮತ್ತು 14 ಮಂದಿಗೆ ರಾಜ್ಯ ಸಚಿವರಾಗಿ ಹಾಗೂ ಐವರು ಸ್ವತಂತ್ರ ಖಾತೆ ಸಚಿವರು ಸೇರಿದಂತೆ ಒಟ್ಟು 24 ಮಂದಿಗೆ ಪ್ರಮಾಣವಚನ ಬೋಧಿಸಿದರು.

ಸಮಾರಂಭದಲ್ಲಿ  ಮಾಜಿ ವಿಧಾನಸಭಾ ಸ್ಪೀಕರ್ ರಾಜೇಂದ್ರ ತ್ರಿವೇದಿ,  ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಜಿತು ವಾಘಾನಿ, ಋಷಿಕೇಶ್ ಪಟೇಲ್, ಪೂರ್ಣೇಶ್ ಮೋದಿ, ರಾಘವಜಿ ಪಟೇಲ್, ಕಾನುಭಾಯಿ ದೇಸಾಯಿ, ಕಿರಿತ್ಸಿನ್ ರಾಣಾ, ನರೇಶ್ ಪಟೇಲ್, ಪ್ರದೀಪ್ ಪರ್ಮಾರ್ ಮತ್ತು ಅರ್ಜುನ್ ಸಿಂಗ್ ಚೌಹಾಣ್ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಇನ್ನು ಮಾಜಿ ಸಿಎಂ ವಿಜಯ್ ರೂಪಾನಿ ಸಂಪುಟದಲ್ಲಿದ್ದ ಸಚಿವರಿಗೆ ಈ ಬಾರಿ ಅವಕಾಶ ನೀಡಲಾಗಿಲ್ಲ.

- Advertisement -

Latest Posts

Don't Miss