1.ರೈತರ ವಿರುದ್ಧದ ಕೇಸ್ ವಾಪಸ್…!
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರೋ ಮಧ್ಯೆ ರೈತರ ವಿರುದ್ಧದ ಸುಮಾರು 900 ಕೇಸ್ ಗಳನ್ನು ಹಿಂತೆಗೆದುಕೊಳ್ಳೋದಕ್ಕೆ ಯೋಗಿ ಸರ್ಕಾರ ನಿರ್ಧರಿಸಿದೆ. ಪೈರಿಗೆ ಬೆಂಕಿ ಇಡೋ ಮೂಲಕಪರಿಸರ ಮಾಲಿನ್ಯಕ್ಕೆ ಕಾರಣವಾಗಿದ್ದ ಆರೋಪದ ಮೇರೆಗೆ ರೈತರ ಮೇಲೆ ಕೇಸ್ ದಾಖಲಾಗಿತ್ತು. ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟ ಎದುರಿಸುತ್ತಿರೋ ರೈತರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿದ್ದ ಕೇಸ್ ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ ಆದೇಶಿಸಿದೆ.
2. ಮೋದಿ ಸ್ವೀಕರಿಸಿದ ಗಿಫ್ಟ್ ಮತ್ತು ಸ್ಮರಣಿಕೆಗಳ ಹರಾಜು..!!
ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವೀಕರಿಸಿರುವ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ಸೆಪ್ಟೆಂಬರ್ 17 ರಿಂದ ಸಂಸ್ಕೃತಿ ಸಚಿವಾಲಯ ಇ-ಹರಾಜು ಮಾಡಲಿದೆ. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು, ನರೇಂದ್ರ ಮೋದಿ ಅವರು ಸ್ವೀಕರಿಸಿರುವ ಉಡುಗೊರೆಗಳು ಮತ್ತು ಸ್ಮರಣಿಕೆಗಳ ಇ-ಹರಾಜು ಆಯೋಜಿಸಿದೆ. ಇನ್ನು ಹರಾಜಿನಲ್ಲಿ ಮೋದಿಗೆ ಗಿಫ್ಟ್ ಆಗಿ ನೀಡಲಾಗಿರೋ ಶಿಲ್ಪಗಳು, ಪೇಂಟಿಂಗ್, ಶಾಲು, ಪುಸ್ತಕಗಳು ಸೇರಿದಂತೆ ಮತ್ತಿತರ ವಸ್ತುಗಳನ್ನು ಹರಾಜು ಮಾಡಲಾಗುತ್ತೆ. ಇನ್ನು ಈ ಹರಾಜಿನಿಂದ ಬಂದ ಹಣವನ್ನು ನಮಾಮಿ ಗಂಗೆ ಅಭಿಯಾನಕ್ಕೆ ಬಳಸಲಾಗುತ್ತೆ.
3. ಲೋಕಸಭಾ ಚುನಾವಣೆಗೆ ಮುನ್ನ ತೆರೆಯಲಿದೆ ಅಯೋಧ್ಯೆಯಲ್ಲಿನ ರಾಮ ಮಂದಿರ
ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಮೊದಲ ಹಂತವು ಬಹುತೇಕ ಪೂರ್ಣಗೊಂಡಿದೆ.ಇದರ ಚಿತ್ರವನ್ನುರಾಮ ಜನ್ಮಭೂಮಿ ಟ್ರಸ್ಟ್ ಇಂದು ಮೊದಲ ಬಾರಿಗೆ ಪ್ರದರ್ಶಿಸಿತು. 2024 ಲೋಕಸಭಾ ಚುನಾವಣೆಗೂ ಮುನ್ನಲೇ ದೇವಾಲಯದ ಉದ್ಘಾಟನೆಯಾಗಲಿದೆ ಅಂತ ಟ್ರಸ್ಟ್ ತಿಳಿಸಿದೆ. ಇನ್ನು ಕಳೆದ ವರ್ಷ ಆಗಸ್ಟ್ 5 ರಂದು ದೇವಸ್ಥಾನ ನಿರ್ಮಾಣದ ಶಂಕುಸ್ಥಾಪನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೆರವೇರಿಸಿದ್ರು. ಮುಂದಿನ ವರ್ಷ ಡಿಸೆಂಬರ್ ವೇಳೆ ನಿರ್ಮಾಣ ಕಾರ್ಯಪೂರ್ಣಗೊಳ್ಳಲಿದೆ.
4. ‘ಮೋದಿಗೆ ನಿದ್ದೆಯಿಲ್ಲದಂಗೆ ಮಾಡ್ತೀವಿ’
ಅಮೆರಿಕದಲ್ಲಿ ಮೋದಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುವಂತೆ ಮಾಡ್ತೀವಿ ಅಂತ ಖಲಿಸ್ತಾನಿ ಭಯೋತ್ಪಾದಕ ಗುಂಪು ಸಿಖ್ಸ್ ಫಾರ್ ಜಸ್ಟಿಸ್ (SFJ) ಬೆದರಿಕೆಯೊಡ್ಡಿದೆ. ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆ UNGA ದಲ್ಲಿ ಭಾಗವಹಿಸಲು ನರೇಂದ್ರ ಮೋದಿ ಅಮೆರಿಕ ಭೇಟಿ ವೇಳೆ ಅಮೆರಿಕದ ಶ್ವೇತಭವನದ ಹೊರಗೆ ಪ್ರತಿಭಟನೆ ನಡೆಸಲು ಎಸ್ಎಫ್ಜೆ ಯೋಚಿಸಿದೆ. ಭಾರತದಲ್ಲಿ ‘ರೈತರ ಮೇಲಿನ ದೌರ್ಜನ್ಯ’ವನ್ನು ಖಂಡಿಸಿ SFJ ಪ್ರತಿಭಟನೆ ನಡೆಸುವುದಾಗಿ
5. ಅತ್ಯಂತ ಪ್ರಭಾವಿಗಳ ಪಟ್ಟಿಯಲ್ಲಿ ತಾಲಿಬಾನ್ ಸಹಸಂಸ್ಥಾಪಕ
2021ರ ಟೈಮ್ಸ್ ನಿಯತಕಾಲಿಕೆಯಲ್ಲಿ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಜಾಗತಿಕ ಪಟ್ಟಿಯಲ್ಲಿ ತಾಲಿಬಾನ್‌ನ ಸಹ-ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರದಾರ್ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಈ ಪ್ರಭಾವಿಗಳ ಪಟ್ಟಿಯಲ್ಲಿ ಭಾರತೀಯರ ಹೆಸರೂ ಇದ್ದು ಪ್ರಧಾನಿ ನರೇಂದ್ರ ಮೋದಿ, ಸಿಎಂ ಮಮತಾ ಬ್ಯಾನರ್ಜಿ ಸ್ಥಾನ ಪಡೆದಿದ್ದಾರೆ.
6. SBI ಬಂಪರ್ ಆಫರ್…!!!
ಹಬ್ಬದ ಕೊಡುಗೆಯಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗೃಹ ಸಾಲವನ್ನು ಶೇಕಡಾ 6.7ರಷ್ಟು ದರದಲ್ಲಿ ನೀಡಲಿದೆ. ಈ ಆಫರ್ ನಿಂದ ಗ್ರಾಹಕರು 75 ಲಕ್ಷ ಲೋನ್‌ಗೆ 30 ವರ್ಷಗಳ ಅವಧಿಯೊಂದಿಗೆ ರೂ 8 ಲಕ್ಷಕ್ಕಿಂತ ಹೆಚ್ಚಿನ ಬಡ್ಡಿ ಉಳಿತಾಯ ಮಾಡಬಹುದಾಗಿದೆ ಅಂತ ಎಸ್ ಬಿಐ ತಿಳಿಸಿದೆ.
7. ಕಡೆಗೂ ಬಯಲಾಯ್ತು ಸಂಸದೆ ಪುತ್ರನ ತಂದೆ ಹೆಸರು…!
ತಾವು ಜನ್ಮ ನೀಡಿದ್ದ ಮಗುವಿನ ತಂದೆ ಬಗ್ಗೆ ಸಂಸದೆ ಮೇಂಟೇನ್ ಮಾಡಿದ್ದ ಸೀಕ್ರೆಟ್ ಈಗ ರಿವೀಲ್ ಆಗಿದೆ.
ಹೌದು, ತಮ್ಮ ಮಗುವಿನ ತಂದೆ ಯಾರೆಂಬುದನ್ನು ಗೌಪ್ಯವಾಗಿಟ್ಟಿದ್ದ ಸಂಸದೆ ನುಸ್ರತ್ ಗುಟ್ಟು ಮಗುವಿನ ಬರ್ತ್ ಸರ್ಟಿಫಿಕೇಟ್ನಿಂದ ಸ್ಪಷ್ಟವಾಗಿದೆ. ನುಸ್ರತ್ ತಮ್ಮ ಪುತ್ರನಿಗೆ ಯಿಶಾನ್ ಜೆ.ದಾಸ್ಗುಪ್ತ ಎಂದು ಹೆಸರಿಟ್ಟಿದ್ದಾರೆ. ತಂದೆಯ ಹೆಸರಿದ್ದಲ್ಲಿ ನಟ ಯಶ್ ದಾಸ್ಗುಪ್ತ ಎಂಬ ಹೆಸರು ಉಲ್ಲೇಖವಾಗಿದೆ.
8. ಹೊಸ ಅವತಾರದಲ್ಲಿ ಶ್ರೀನಗರ ಕಿಟ್ಟಿ
ನಟನೆಯಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ಶ್ರೀನಗರ ಕಿಟ್ಟಿ ಈಗ ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಕಿಟ್ಟಿ ಅಭಿನಯಿಸಲಿರೋ ‘ಗೌಳಿ’ ಸಿನಿಮಾದ ಶೂಟಿಂಗ್ ಗೆ ಶುರುವಾಗಿದೆ. ಕಿಟ್ಟಿಗೆ ನಾಯಕಿಯಾಗಿ ಪಾವನಾ ಕಾಣಿಸಿಕೊಳ್ಳಲಿದ್ದಾರೆ. ಇನ್ನು ‘ಗೌಳಿ’ ಸಿನಿಮಾದ ಶೂಟಿಂಗ್ ಬಹುತೇಕ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹಳ್ಳಿಯಲ್ಲಿ ನಡೆಯುತ್ತೆ ಅಂತ ಚಿತ್ರ ತಂಡ ತಿಳಿಸಿದೆ.
9. ನಟಿ ಜಾಕ್ವಲಿನ್ ಫರ್ನಾಂಡಿಸ್ ಗೆ ಸಮನ್ಸ್
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡಿಸ್ ಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಸುಖೇಶ್ ಚಂದ್ರಶೇಖರ್ ಗೆ ಸಂಬಂಧಪಟ್ಟ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಕ್ವಲಿನ್ ಈಗಾಗಲೇ ವಿಚಾರಣೆಗೆ ಒಳಗಾಗಿದ್ದಾರೆ. ಸದ್ಯ ಸಮನ್ಸ್ ನೀಡಿರೋ ಇಡಿ ಅಧಿಕಾರಿಗಳು ಸೆ.25ರಂದು ಖುದ್ದು ಹಾಜರಾಗುವಂತೆ ತಿಳಿಸಿದ್ದಾರೆ.
10. ಕ್ಯಾಪ್ಟನ್ಶಿಪ್ ನಿಂದ ಕೆಳಕ್ಕಿಳಿಯಲಿದ್ದಾರೆ ಕೊಹ್ಲಿ
ಟಿ-20 ಬಳಿಕ ವಿರಾಟ್ ಕೊಹ್ಲಿ ಟೀಂ ಇಂಡಿಯಾ ಕ್ಯಾಪ್ಟನ್ಶಿಪ್ ನಿಂದ ಕೆಳಗಿಳಿಯಲಿದ್ದಾರೆ. ಟಿ20 ವಿಶ್ವಕಪ್ ಬಳಿಕ ಟಿ20 ಟೀಮ್ ಇಂಡಿಯಾದ ನಾಯಕತ್ವ ಬಿಟ್ಟುಕೊಟ್ಟು ಬ್ಯಾಟ್ಸ್ಮನ್ ಆಗಿ ಮುಂದುವರಿಯಲಿದ್ದಾರೆ. ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡಗಳಿಗೆ ಅವರ ನಾಯಕತ್ವ ಮುಂದುವರಿಯಲಿದೆ. ಈ ವಿಚಾರವನ್ನ ಖುದ್ದು ಕೊಹ್ಲಿ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.