Friday, July 11, 2025

Latest Posts

ಡೆಂಗ್ಯೂ ಹೊಸ ತಳಿ ಸೃಷ್ಠಿ ..!

- Advertisement -

www.karnatakatv.net :ಮಹಾಮಾರಿ ಕೊರೊನಾ ನಡುವೆ ಈಗ ಡೆಂಗ್ಯೂ ರೋಗವು ಅತಿ ಹೆಚ್ಚು ಹಬ್ಬುತ್ತಿದ್ದು, ಮುಂದೆ ಬರುವ ಹಬ್ಬಗಳ ಹಿನ್ನೆಲೆ ಸಾರ್ವಜನಿಕವಾಗಿ ಜನರು ಒಂದೇ ಕಡೆ ಸೇರದಂತೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಸೂಚಿಸಿದ್ದಾರೆ.

ಡೆಂಗ್ಯೂ ಸೋಂಕು ಹೊಸ ತಳಿ ಬಂದಿರುವ ಕಾರಣ ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ರವಾನಿಸುವಂತೆ ಹೊಸ ತಳಿಯು ವರದಿಯಾದ ರಾಜ್ಯಗಳು ಉನ್ನತ ಮಟ್ಟದ ಸಭೆಯಲ್ಲಿ ಪ್ರಸ್ತಾಪಿಸಿದೆ. ಸೆರೋಟೈಪ್ -2 ತಳಿಯ ಡೆಂಗ್ಯೂ ಜ್ವರವು ನೂತನ ರೀತಿಯ ಅಪಾಯ ಮತ್ತು ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ಇದರ ಮಧ್ಯೆ ಡೆಂಗ್ಯೂ ರೋಗದ ಲಕ್ಷಣಗಳು ರೋಗ ಹರಡುವಿಕೆ ನಿಯಂತ್ರಣಕ್ಕೆ ಹಾಗೂ ಚಿಕಿತ್ಸೆಗೆ  ಸಂಬಂಧಿಸಿದಂತೆ ಪ್ರಕರಣಗಳು ವರದಿಯಾಗಿವೆ. ಆಂದ್ರಪ್ರದೇಶ, ಗುಜರಾತ್, ಕೇರಳ, ಕರ್ನಾಟಕ, ಉತ್ತರಪ್ರದೇಶ, ಮಹಾರಾಷ್ಟ್ರ, ಒಡಿಸ್ಸಾ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಈ ಹೋಸ ಪ್ರಕರಣಗಳು ಪತ್ತೆಯಾಗಿದೆ.

- Advertisement -

Latest Posts

Don't Miss