Sunday, December 22, 2024

Latest Posts

ಕುಶಲಕರ್ಮಿಗಳ ಉತ್ತೇನಕ್ಕಾಗಿ ವಿಶೇಷ ಸ್ಟುಡಿಯೋ..!

- Advertisement -

www.karnatakatv.net :ಬೆಂಗಳೂರು: ಫ್ಯಾಶನ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡುತ್ತಲೇ, ಆ ಜಗತ್ತಿಗೆ ಪ್ರತಿಭಾವಂತರನ್ನು ಕೊಡಮಾಡಿರುವ ಅಪರೂಪದ ಸಂಸ್ಥೆ ಕ್ರೀಮ್ ಕಲರ್ಸ್ ಸ್ಟುಡಿಯೋಸ್ ಸಂಸ್ಥೆಯೀಗ ಮತ್ತೊಂದು ಸಾಹಸದ ಮೈಲಿಗಲ್ಲು ಸ್ಥಾಪಿಸುವಲ್ಲಿ ಮೊದಲ ಹೆಜ್ಜೆಯಿರಿಸಿದೆ. ಈ ನೆಲದ ನೈಜ ಘಮವನ್ನು ಫ್ಯಾಶನ್ ಜಗತ್ತಿಗೆ ಪರಿಚಯಿಸುವ ಚೆಂದದ ಯಾನವೊಂದಕ್ಕೆ  ಇದೀಗ ಚಾಲನೆ ಸಿಕ್ಕಿದೆ.  ದೇಸೀ ಸೊಗಡಿನ ಕಾಸ್ಟ್ಯೂಮ್‌ಗಳ ಮೂಲಕ, ಕುಶಲಕರ್ಮಿಗಳಿಂದಲೇ ತಯಾರಾದ ವಿಶೇಷ ಬಟ್ಟೆಗಳ ಮೂಲಕವೇ ವಿಶಿಷ್ಟವಾದೊಂದು ಫ್ಯಾಶನ್ ಶೋ ನೆರವೇರಿದೆ. ಈ ಮೂಲಕ ಕುಶಲಕರ್ಮಿಗಳ ವಿನ್ಯಾಸಗಳನ್ನು ಪರಿಚಯಿಸುವ ಮೂಲಕ ಅವುಗಳಿಗೊಂದು ಮಾರುಕಟ್ಟೆ ಕಲ್ಪಿಸಿ, ಆ ಮೂಲಕ ಪ್ರತಿಭಾವಂತರನ್ನು ಫ್ಯಾಶನ್ ಲೋಕಕ್ಕೆ ಪರಿಚಯಿಸಿ ಬೆಳೆಸುವ ಸದುದ್ದೇಶ ಕ್ರೀಮ್ ಕಲರ್ಸ್ ಸ್ಟೂಡಿಯೋ ಸಂಸ್ಥಾಪಕರಿಗಿದೆ.

ತುಂಬಾ ಸೂಕ್ಷ್ಮವಾದ, ಇಕೋ ಫೆಂಡ್ಲಿ ವಿನ್ಯಾಸಗಳು ಈ ಫ್ಯಾಶನ್ ಶೋನಲ್ಲಿ ಪ್ರದರ್ಶನಗೊಂಡಿವೆ. ಈ ಮೂಲಕ ಉದ್ಘಾಟನೆಗೊಂಡಿರುವ ಈ ಸ್ಟುಡಿಯೋ ನಮ್ಮ ನಾಡಿನ ಮಟ್ಟಿಗೆ ಬಲು ಅಪರೂಪದ್ದು. ಯಾಕೆಂದರೆ, ಇಲ್ಲಿ ಎಲ್ಲವೂ ಸುಸಜ್ಜಿತವಾಗಿದೆ. ಫೋಟೋಗ್ರಫಿ, ವಿಡಿಯೋಗ್ರಫಿ ಮುಂತಾದವುಗಳಿಗೆ ಇದನ್ನು ಬಾಡಿಗೆಗೆ ಕೊಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಟಾಪ್ ಟು ಬಾಟಮ್ ಫ್ಯಾಶನ್, ಸ್ಟೈಲಿಂಗ್ ಸೇರಿದಂತೆ ಈ ಸ್ಟುಡಿಯೋ ಸರ್ವ ರೀತಿಯಲ್ಲಿಯೂ ಸುಸಜ್ಜಿತವಾಗಿದೆ. ಫ್ಯಾಶನ್ ಜಗತ್ತಿನತ್ತ ನಿಜವಾದ ಆಸಕ್ತಿ ಹೊಂದಿರುವವರನ್ನು ಈ ಸ್ಟುಡಿಯೋ ಮೂಲಕವೇ ತಯಾರು ಮಾಡಿ ಸಜ್ಜುಗೊಳಿಸುವ ಮಹತ್ವಾಕಾಂಕ್ಷೆಯೂ ಆಯೋಜಕರಲ್ಲಿದೆ. ಈ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಸ್ಥಾಪಕರಾದ ಅನಿಲ್ ಆನಂದ್, ನಂದಕಿಶೋರ್, ಸಿಂಧು ಲೋಕನಾಥ್, ಸಂಗೀತ ರಾಜೀವ್, ಅರು ಗೌಡ, ಮನೋಹರ್ ಜೋಷಿ ಮುಂತಾದವರು ಭಾಗವಹಿಸಿದ್ದರು. ಹಾಗೇನೇ ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ ವೊಂದರಲ್ಲಿ ದೊಡ್ದ ಮಟ್ಟದ ಫ್ಯಾಷನ್ ಷೋ ಸಹ ನಡೆದಿದ್ದು, ಮಾಡೆಲ್ಸ್ ಹೆಜ್ಜೆ ಹಾಕಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ನಟಿ  ಸೋನು ಗೌಡ, ಭಾವನ ರಾವ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ರು.

ಕರ್ನಾಟಕ ಟಿವಿ – ಬೆಂಗಳೂರು

- Advertisement -

Latest Posts

Don't Miss