www.karnatakatv.net :ಆದಾಯ ತೆರಿಗೆ ಇಲಾಖೆ, ನಟ ಸೋನು ಸೂದ್ ಮನೆ ಮತ್ತು ಕಚೇರಿಯ ಮೇಲೆ ದಾಳಿ ನಡೆಸಿದ ಹಿನ್ನಲೆ ನಟ ಟ್ವಿಟ್ ಮೂಲಕ ಈ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು.. ಬಹುಭಾಷಾ ನಟ ಸೋನು ಸೂದು ಮನೆಗೆ ಮತ್ತು ಕಚೇರಿಗೆ ಐಟಿ ರೈಡ್ ಆದಬೆನ್ನಲ್ಲೆ ಅವರು ಸಾಮಾಜಿಕ ಜಾಲತಾಣದಲ್ಲಿ ಅದರ ಬಗ್ಗೆ ತಿಳಿಸಿ, ‘ ಒಂದು ರೂಪಾಯಿ ಹಣವೂ ಕೂಡಾ ನನ್ನ ಟ್ರಸ್ಟ್ ನಲ್ಲೆ ಇದೆ, ನೀವು ಯಾವಾಗಲು ನಿಮ್ಮ ಕತೆಯನ್ನು ಹೇಳಬೇಕಾಗಿಲ್ಲ, ಸಮಯ ಬರುತ್ತೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ವೆ ಎಂದು ಹೇಳಿ ಕಳೆದ ನಾಲ್ಕು ದಿನದಿಂದ ನಟ ಸೂದ್ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿದ್ದು, ಅಧಿಕಾರಿಗಳು ಸೋನು ಸೂದ್ 20 ಕೋಟಿ ಗೂ ಅಧಿಕ ತೆರಿಗೆ ವಂಚಿಸಿದ್ದಾರೆ ಎಂದು ಆರೋಪವನ್ನು ಮಾಡಿದ್ದಾರೆ. ಸತತವಾಗಿ ಮೂರು ದಿನಗಳಕಾಲ ಸಮೀಕ್ಷೆಯನ್ನು ನಡೇಸಿದ ಐಟಿ ಅಧಿಕಾರಿಗಳು, ನಟನಿಗೆ ಸಂಬಂಧಿಸಿದ ನಾನ್ ಪ್ರಾಫಿಟ್ ಸಂಸ್ಥೆಯು 2.1 ಕೋಟಿಗಳನ್ನು ವಿದೇಶಿ ಮೂಲಗಳಿಂದ ಸಂಗ್ರಹಿಸಿದೆ ಎಂದರು. ಇದು ಸರ್ಕಾರದ ವಿದೇಶಿ ಹಣ ಸ್ವೀಕಾರದ ಕಾನೂನಿಗೆ ವಿರುದ್ಧವಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದರು.




