ರಾಜ್ಯದಲ್ಲಿ ಕಪ್ಪು ಸೋಂಕಿನ ಸಂಖ್ಯೆ 3900..!

www.karnatakatv.net :ಬೆಂಗಳೂರು: ಮಹಾಮಾರಿ ಕೊರೊನಾ ದಿಂದ ಗುಣಮುಖರಾಗಿದ್ದ ಕೂಡಲೇ ಬ್ಲ್ಯಾಕ್ ಫಂಗಸ್ ಸೋಂಕಿಗೆ  ಜನರು ಬಲಿಯಾಗುತ್ತಿದ್ದಾರೆ. ಈ ಸೋಂಕಿಗೆ ರಾಜ್ಯದಲ್ಲಿ 3900 ಮಂದಿ ತುತ್ತಾಗಿದ್ದಾರೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

ಈ ಸೋಂಕು ಹೇಚ್ಚಾಗಿ ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲೇ ಕಾಣಿಸಿಕೊಳ್ಳುತ್ತದೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಧಾಕರ್ “ಕಪ್ಪು ಶಿಲೀಂಧ್ರ ಸೋಂಕಿಗೆ ಚಿಕಿತ್ಸೆಯು ಹೆಚ್ಚಿದ್ದು, ಚಿಕಿತ್ಸೆಯನ್ನು ಉಚಿತವಾಗಿ ನೀಡಲು ಸರ್ಕಾರ ತಿರ್ಮಾನಿಸಿದೆ” ಎಂದು ಹೇಳಿದರು.

ಕಪ್ಪು ಶಿಲೀಂಧ್ರ ಸೋಂಕಿಗೆ 96,060 ವಯಲ್ ಗಳ ಲಿಪೊಸೊಮಾಲ್ ಆಂಫೊಟರಿಸಿನ್ ತರಿಸಿಕೊಂಡಿದ್ದು, 51,000 ವಯಲ್ ಗಳನ್ನು ಈಗಾಗಲೇ ಜಿಲ್ಲೆಗಳಿಗೆ ವಿತರಿಸಲಾಗಿದೆ, ಎಂದು ತಿಳಿಸಿದ್ರು. ಬಿದರ್ ಜಿಲ್ಲೆಯಲ್ಲಿ ಔಷಧಿಗಳ ಕೊರತೆ ಉಂಟಾಗಿದ್ದು, ಕೆಲವು ಔಷಧಿಗಳ ಸರಬರಾಜಿನಲ್ಲೇ ಅಷ್ಟೇ ಕೊರತೆಯಾಗಿದ್ದು ಪೂರಕ ಔಷಧಗಳನ್ನು ನೀಡಲಾಗಿದೆ  ಎಂದು ಹೇಳಿದರು.  

ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ 437 ಮಂದಿ ಬಲಿಯಾಗಿದ್ದಾರೆ, ಹಾಗೇ ಬೆಂಗಳೂರು ನಗರದಲ್ಲೆ ಮಾತ್ರ  ತುತ್ತಾದವರು 149 ಮಂದಿ ಮೃತಪಟ್ಟಿದ್ದು, ಇದು ಕೇವಲ ಕಪ್ಪು ಶಿಲೀಂಧ್ರ ಸೋಂಕಿಗೆ ಮಾತ್ರವಲ್ಲದೆ ಆವರ ದೇಹದಲ್ಲಾಗುವ ರಕ್ತದೊತ್ತಡ ಮತ್ತು ಶುಗರ್ ಅಂಶ ಹೆಚ್ಚಳದಿಂದ ಸ್ಟೆರೈಯ್ಡ್ ಚಿಕಿತ್ಸೆಯಿಂದಲೂ ಈ ಸೋಂಕು ಹೇಚ್ಚಾಗುತ್ತದೆ.

ಕರ್ನಾಟಕ ಟಿವಿ- ಬೆಂಗಳೂರು

About The Author