ಸಾಲುಸಾಲು ಹಬ್ಬಗಳ ಹಿನ್ನೆಲೆ- ರಾಜ್ಯಗಳಿಗೆ ಕೇಂದ್ರ ಹೊಸ ಮಾರ್ಗಸೂಚಿ..!

www.karnatakatv.net: ಬೆಂಗಳೂರು :ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿರೋ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹೊಸ ಮಾರ್ಗಸೂಚಿ ರಚಿಸೋ ಮೂಲಕ ಎಚ್ಚರ ವಹಿಸುವಂತೆ ಸೂಚನೆ ನೀಡಿದೆ.

ಸಾಲು ಸಾಲು ಹಬ್ಬಗಳ ಮೇಲೆ ನಿಗಾ ವಹಿಸಬೇಕು. ಜನರ ಗುಂಪುಗೂಡದಂತೆ ನಿಯಂತ್ರಣ ವಹಿಸೋದು ಅತ್ಯವಶ್ಯಕ. ಕಂಟೈನ್ಮೆಂಟ್ ಜೋನ್ ಗಳಲ್ಲಿ ಕಡ್ಡಾಯವಾಗಿ ಜನರು ಗುಂಪುಗೂಡುವುದನ್ನು ಸಂಪೂರ್ಣ ನಿಯಂತ್ರಣಕ್ಕೆ ತರಬೇಕು. ಕನಿಷ್ಟ ಮಂದಿ ಗುಂಪುಗೂಡುವಿಕೆ ಅನಿವಾರ್ಯವಾದಲ್ಲಿ ಇದಕ್ಕೆ ಪೂರ್ವಾನುಮತಿ ಪಡೆದಿರಬೇಕು. ಪಾಸಿಟಿವಿಟಿ ದರ ಶೇ 5ರಷ್ಟು  ಇರುವ ಜಿಲ್ಲೆಗಳಲ್ಲಿ ಮಾತ್ರ ಕನಿಷ್ಟ ಜನ ಸೇರುವಿಕೆಗೆ ಷರತ್ತುಬದ್ಧ ಅನುಮತಿ ನೀಡಬೇಕು. ಒಂದು ವಾರದ ಕೇಸ್ ಪಾಸಿಟಿವಿಟಿ ರೇಟ್ ಪರಿಗಣಿಸಿದ ಬಳಿಕವೇ ನಿಯಮಗಳ ಸಡಿಲಿಕೆ ಹಾಗೂ ನಿರ್ಬಂಧಗಳನ್ನು ವಿಧಿಸಬೇಕು ಅಂತ ಕೇಂದ್ರ ಸರ್ಕಾರ ಸೂಚನೆ ನೀಡಿದೆ. 

ಕೊರೋನಾ 3ನೇ ಅಲೆ ಬಗ್ಗೆ ಎಲ್ಲಾ ರಾಜ್ಯಗಳಿಗೂ ಎಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರ  ಇದೀಗ ಮುಂಬರುವ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.

ಕರ್ನಾಟಕ ಟಿವಿ -ಬೆಂಗಳೂರು

About The Author