www.karnatakatv.net: ಬೆಂಗಳೂರು: ಸ್ಯಾಂಡಲ್‌ವುಡ್ ಯುವರಾಜ,ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ರೇವತಿ ಜನ್ಮ ನೀಡಿದ್ದಾರೆ. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದು ಈ ಮೂಲಕ ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರೋ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, ನನ್ನ ಜೀವನದಲ್ಲಿ ಇನ್ನೊಂದು ಶುಭ ಘಳಿಗೆ ಬಂದಿದೆ. ನಮ್ಮ ಪರಿವಾರಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ತಾತನಾದೆ ಅಂತ ಹೇಳಲು ಅತೀವ ಸಂತಸವಾಗುತ್ತಿದೆ. ಕಂದನಿಗೆ ನಿಮ್ಮೆಲ್ಲರ ಹಾರೈಕೆ ಮತ್ತು ಆಶೀರ್ವಾದ ಇರಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಅಂತ ಸಂತಸ ವ್ಯಕ್ತಪಡಿಸಿದ್ದಾರೆ.
ಮಗು ಆಗಮನದ ಬಗ್ಗೆ ಟ್ಟೀಟ್ ಮಾಡಿರೋ ಜೆಡಿಎಸ್ ಶಾಸಕ ಶರವಣ ‘ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಅವರಿಗೆ ಗಂಡು ಮಗು ಜನನವಾಗಿದೆ. ಮಾಜಿ ಪ್ರಧಾನಿ ಶ್ರೀ ಹೆಚ್ ಡಿ ದೇವೇಗೌಡರ ಮರಿ-ಮೊಮ್ಮಗ ಆಗಮನ ಅತ್ಯಂತ ಸಂತೋಷ ತಂದಿರುವಂತಹ ವಿಷಯ. ಶಿರಡಿ ಸಾಯಿಬಾಬಾರ ಅನುಗ್ರಹ ಮಗುವಿನ ಮೇಲಿರಲೆಂದು ಆಶಿಸುತ್ತೇನೆ ಅಂತ ಶುಭಕೋರಿದ್ದಾರೆ.
2020ರ ಏಪ್ರಿಲ್ನಲ್ಲಿ ರೇವತಿ ಜೊತೆ ನಿಖಿಲ್ ಕುಮಾರಸ್ವಾಮಿ ಸಪ್ತಪದಿ ತುಳಿದಿದ್ದರು. ಇನ್ನು ನಿಖಿಲ್ ಗೆ ಸ್ಯಾಂಡಲ್ ವುಡ್ ಮತ್ತು ರಾಜಕೀಯ ಗಣ್ಯರಿಂದ ಶುಭಾಷಯಗಳ ಮಹಾಪೂರವೇ ಹರಿದುಬರ್ತಿದೆ.
ಕರ್ನಾಟಕ ಟಿವಿ -ಬೆಂಗಳೂರು