- Advertisement -
www.karnatakatv.net: ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಪ್ರವಾಸದಲ್ಲಿರೋ ಮಧ್ಯೆಯೇ ಭಾರತದ ರೈತರ ಸಮಸ್ಯೆ ಬಗ್ಗ ಮೋದಿ ಜೊತೆ ಚರ್ಚಿಸಿ ಅಂತ ರೈತ ಮುಖಂಡ ರಾಕೇಶ್ ಟಿಕಾಯತ್ ಜೋ ಬೈಡನ್ ಗೆ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಕಳೆದ 11 ತಿಂಗಳಿನಿಂದ ರೈತರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡ್ತಿದ್ದಾರೆ. ಇದ್ರಲ್ಲಿ ಸುಮಾರು 700 ರೈತರು ಪ್ರಾಣತೆತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ 3 ವಿವಾದಿತ ಕೃಷಿ ಕಾಯ್ದೆಗಳೇ ಕಾರಣ, ದಯವಿಟ್ಟು ಪ್ರಧಾನಿ ಮೋದಿ ಜೊತೆ ಈ ಬಗ್ಗೆ ಕೂಡ ಚರ್ಚೆ ನಡೆಸಿ. ಭಾರತದಲ್ಲಿ ಜಾರಿಯಲ್ಲಿರೋ ಈ ಕಾಯ್ದೆಗಳನ್ನು ರದ್ದುಗಳಿಸುವಂತೆ ಕಿವಿಮಾತು ಹೇಳಿ ಅಂತ ಬೈಡನ್ ಗೆ ಟಿಕಾಯತ್ ಮನವಿ ಮಾಡಿದ್ದಾರೆ.
- Advertisement -

