www.karnatakatv.net ಚಾಮರಾಜನಗರ : ಪದವೀಧರರು ಹೆಚ್ಚಿನ ಸಂಖ್ಯೆಯಲ್ಲಿ ಪದವೀಧರರ ವೇದಿಕೆಗೆ ಸದಸ್ಯರಾಗಿ ಲಭ್ಯವಿರುವ ಸೇವೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಅಂತ ಪದವೀಧರರ ವೇದಿಕೆ ಅಧ್ಯಕ್ಷ ವಿನಯ್ ಹೇಳಿದ್ದಾರೆ.
ಗುಂಡ್ಲುಪೇಟೆಯಲ್ಲಿ ನಡೆದ ದಕ್ಷಿಣ ಪದವೀಧರರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ವಿನಯ್, ಮೈಸೂರು ಮಂಡ್ಯ, ಹಾಸನ ಚಾಮರಾಜನಗರದಲ್ಲಿನ ಬಹುತೇಕ ಪದವೀಧರರು ಈ ವೇದಿಕೆಗೆ ನೋಂದಣಿ ಮಾಡಿಕೊಂಡಿಲ್ಲ. ಈ ನಾಲ್ಕು ಜಿಲ್ಲೆಯಲ್ಲಿನ ಎಲ್ಲಾ ಪದವೀಧರರು ಪದವೀಧರ ವೇದಿಕೆಗೆ ನೋಂದಾಯಿಸಿಕೊಂಡು ವೇದಿಕೆಯಿಂದ ಲಭ್ಯವಿರುವ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು ಅಂತ ಕರೆ ನೀಡಿದ್ರು.
ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸ್ಯಾಂಡಲ್ ವುಡ್ ನಟ ಪ್ರೇಮ್, ಪದವೀಧರ ವೇದಿಕೆಯಿಂದ ಜನ ಸೇವೆಯಲ್ಲಿ ತೊಡಗಿರುವ ವಿನಯ್ ರವರ ಶ್ರಮಕ್ಕೆ ತಕ್ಕ ಪ್ರತಿಪಲ ದೊರೆಯಲಿದೆ , ಈ ವೇದಿಕೆಯಲ್ಲಿ ನೋಂದಾಯಿಸಿಕೊಂಡ ಪ್ರತಿಯೊಬ್ಬ ಪದವೀಧರರಿಗೂ ಒಂದು ಲಕ್ಷದವರೆಗೂ ವಿಮೆ ಸೌಲಭ್ಯವಿರುತ್ತದೆ ಇದರೊಂದಿಗೆ ಇನ್ನು ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಚಿಂತನಾಶೀಲತೆ ಅವರಲ್ಲಿದೆ. ಇಂತಹ ಸದ್ಗುಣವುಳ್ಳ ನಾಯಕನ ಅಗತ್ಯತೆ ಹೆಚ್ಚಿದ್ದು ವಿನಯ್ ಬೆಂಬಲಕ್ಕೆ ಸದಾ ನಿಲ್ಲಬೇಕು ಅಂತ ಪ್ರೇಮ್ ಮನವಿ ಮಾಡಿದರು. ಇನ್ನು ಈ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ, ಶಿಕ್ಷಕಿಯರನ್ನ ಗುರುತಿಸಿ ಸನ್ಮಾನಿಸಲಾಯಿತು.
ಪ್ರಸಾದ್, ಕರ್ನಾಟಕ ಟಿವಿ. ಚಾಮರಾಜನಗರ