Monday, December 23, 2024

Latest Posts

ಅರಣ್ಯ ಇಲಾಖೆಗೆ ಒಂದಿಲೊಂದು ತಲೆ ನೋವು..!

- Advertisement -

www.karnatakatv.net : ತುಮಕೂರು: ಇಷ್ಟು ದಿನಗಳ ಕಾಲ ವನ್ಯಮೃಗಗಳ ಮೇಲೆ ಕಣ್ಣಿಟ್ಟಿತ್ತು ಅರಣ್ಯ ಇಲಾಖೆ. ಈ ನಡುವೆ ಶ್ರೀ ಗಂಧಗಳನ್ನ ದೋಚುವ ಚೋರರು ಜಿಲ್ಲಾಡಳಿತಕ್ಕೆ ತಲೆ ನೋವಾಗಿದ್ದಾರೆ. ದಿನೇ ದಿನೇ ವನ್ಯಜೀವಿಗಳು ಹಾಗೂ ಮನುಷ್ಯರ ನಡುವಿನ ಸಂಘರ್ಷ ಮತ್ತಷ್ಟು ಅತಂಕವನ್ನ ಸೃಷ್ಠಿಸಿದೆ.

ಕಳೆದ ಒಂದೆರಡು ವರ್ಷದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್, ತುಮಕೂರು, ಗುಬ್ಬಿ ಹಾಗೂ ತುರುವೇಕೆರೆ ತಾಲೂಕು ವ್ಯಾಪ್ತಿಯಲ್ಲಿ ಚಿರತೆ ಕಾಟ ವಿಪರೀತವಾಗಿತ್ತು. ಅಲ್ಲದೇ  ಒಂದು ವರ್ಷದ ಅವಧಿಯಲ್ಲಿ ನರಭಕ್ಷಕ ಚಿರತೆಗಳ ದಾಳಿಗೆ ಪುಟ್ಟಪುಟ್ಟ ಮಕ್ಕಳು ಸೇರಿ ಸುಮಾರು ಐವರು ಬಲಿಯಾಗಿದ್ದರು. ಆದರೂ ಅರಣ್ಯ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಲ್ಲಿ ವಿಫಲಾಗಿದೆ ಅರಣ್ಯ ಇಲಾಖೆ. ಇದು ಜನರಲ್ಲಿ ಮನೆ ಮಾಡಿರೋ ಆತಂಕ ಮತ್ತು ಆರೋಪ. ಇದರ ಪರಿಣಾಮ ಸುಮಾರು 30 ರಿಂದ 40 ಚಿರತೆಗಳನ್ನ ಸೆರೆ ಹಿಡಿದು ಬನ್ನೇರುಘಟ್ಟ ಸೇರಿದಂತೆ ಸುರಕ್ಷಿತ ಸ್ಥಳಗಳಿಗೆ ಅವುಗಳನ್ನು ರವಾನಿಸಲಾಗಿದೆ.  

ಇನ್ನು ಚಿರತೆಗಳನ್ನು ಸೆರೆಹಿಡಿದು ಬೇರೆಡೆ ಸ್ಥಳಾಂತರಿಸಿ ಕೈತೊಳೆದುಕೊಂಡಿತ್ತು ಅರಣ್ಯ ಇಲಾಖೆ. ಆ ವೇಳೆ ಒಂದಷ್ಟು ಚಿರತೆ ಹಾವಳಿ ಕಡಿಯಾಗಿತ್ತು.  ಇದೀಗ ಮತ್ತೆ ಚಿರತೆ ಹಾವಳಿ ಶುರುವಾಗಿದೆ. ಹೊಲ ಮನೆ ಸೇರಿದಂತೆ ಕೃಷಿ ಚಟುವಟಿಕೆಗಳಿಗೂ ಹಗಲು ಹೊತ್ತಲ್ಲೂ ಮನೆಯಿಂದ ಹೊರಗೆ ಬರಲು ಜನರು ಹೆದರುತಿದ್ದಾರೆ. ಕಾರಣ ಕಳೆದ ಎರಡುತಿಂಗಳಿಂದ ಸುಮಾರು ೫ ಚಿರತೆಗಳನ್ನು ಸೆರೆಹಿಡಿಯಲಾಗಿದ್ದೆ ಎನ್ನುತ್ತಾರೆ ಡಿಎಫ್ಓ ರಮೇಶ್. 

ಜಿಲ್ಲೆಯಲ್ಲಿ ೧.೧೪ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಹಾಗಾಗಿ ಅದ್ಯಾಕೋ ಕಲ್ಪತರು ನಾಡಿನ ಅರಣ್ಯದ ಮೇಲೆ ಕಾಡುಗಳ್ಳರ ಕಣ್ಣು ಬಿದ್ದಿದೆ. ಕುಣಿಗಲ್ನ ಕಂಪ್ಲಾಪುರ ಹಾಗೂ ಗುಬ್ಬಿ ತಾಲೂಕಿನ ಹರಗಲದೇವಿ ಕಾವಲ್ ಮಿಸಲು ಅರಣ್ಯದಲ್ಲಿ ಶ್ರೀಗಂಧಚೋರರು ಅರಣ್ಯ ಇಲಾಖೆ ನಿದ್ದೆ ಕೆಡಿಸಿದ್ದಾರೆ. ಇತ್ತ ಪಾವಗಡ ಮಧುಗಿರಿ, ಕೊರಟಗೆರೆ ಹಾಗೂ ತುಮಕೂರು ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಕಳೆದ ಎರಡು ತಿಂಗಳಿಂದ ಕರಡಿ ಮತ್ತು ಚಿರತೆ ದಾಳಿಗೆ ಕುರಿ, ಮೇಕೆ ದನಕರುಗಳು ಬಲಿಯಾಗಿವೆ. ಇದೆಲ್ಲದಕ್ಕೂ ಮಾನವನ ಅಭಿವೃದ್ಧಿ ಕಾರಣ, ಎತ್ತಿನಹೊಳೆ, ಹೇಮಾವತಿ ನೀರಾವರಿ ಯೋಜನೆಗಳು ಹಾಗೂ ಬೃಹತ್ತಾಗಿರುವ ಕ್ರಷರ್ಗಳೆ ಕಾರಣ ಅನ್ನೋದು ಜಿಲ್ಲಾ ಅರಣ್ಯ ಇಲಾಖೆ ವಾದ.

ದಿನದಿಂದ ದಿನಕ್ಕೆ ಆಹಾರ ಹರಸುತ್ತ ಜನವಸತಿ ಪ್ರದೇಶಗಳಿಗೆ ಚಿರತೆಗಳು ಕರಡಿಗಳು ನುಗ್ಗುತ್ತಿವೆ. ಇದು ಜನರಲ್ಲಿ ಭಯ ಹೆಚ್ಚಾಗಿದೆ. ಬೋನ್ ಇಟ್ಟರು ಕೆಲವೊಮ್ಮೆ ಚಿರತೆಗಳು ಎಸ್ಕೇಪ್ ಆಗುತ್ತಿವೆ. ಕರಡಿಗಳು ಬೋನ್ಗೆ ಬೀಳುವುದು ಬಹಳ ಕಡಿಮೆ. ಹೀಗಾಗಿ ಚಿರತೆ ಹಾಗೂ ಕರಡಿಗಳು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿದೆ. ಜನರು ನೆಮ್ಮದಿ ಇಲ್ಲದಂತೆ ಸದಾ ಭಯದಿಂದ ಬದುಕುತಿದ್ದಾರೆ. ಪಾವಗಡದಲ್ಲಿ ಕರಡಿದಾಳಿ ಇತ್ತೀಚಿಗೆ ನಡೆದಿದ್ದು ಸದ್ಯಾ ಯಾವುದೇ ಪ್ರಾಣಾಪಾಯವಾಗಿಲ್ಲ. ಹೀಗೆ ಒಂದು ಕಡೆ ಕಾಡುಗಳ್ಳರ ಹಾವಳಿ ಮತ್ತೊಂದೆಡೆ ಕಾಡು ಪ್ರಾಣಿಗಳ ಕಾಟ ಇವೆಲ್ಲವನ್ನು ಸಮರ್ಪಕವಾಗಿ ಅರಣ್ಯ ಇಲಾಖೆ  ನಿಭಾಯಿಸುವ ಹೊಣೆ ಹೆಚ್ಚಿದೆ.

ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ – ತುಮಕೂರು

- Advertisement -

Latest Posts

Don't Miss