Friday, December 27, 2024

Latest Posts

ಜಿಲ್ಲೆಗಳಲ್ಲಿ ಹೆಚ್ಚಾದ ಕೋವಿಡ್ -19 ಮರಣ ಪ್ರಮಾಣ..!

- Advertisement -

www.karnatakatv.net: ದೇಶಾದ್ಯಂತ ಕೊರೊನಾ ಮಹಾಮಾರಿಯಿಂದ ಜನರು ತತ್ತರಿಸಿ ಹೋಗಿದ್ರು ಆದ್ರೆ ಈಗ ಕೊಂಚ ಕೊರೊನಾ ಸಂಖ್ಯೆ ಕಡಿಮೆಯಾಗಿದ್ದು, ಆದರೆ 20 ಜಿಲ್ಲೆಗಳಲ್ಲಿ ಮಾತ್ರ ಮರಣ ಪ್ರಮಾಣವು ಹೆಚ್ಚಾಗಿಯೇ ಇದೆ.

ಹೌದು, ಕೊರೊನಾ ಸಂಖ್ಯೆ ಈಗ ಕಡಿಮೆಯಾಗಿದ್ದು, ಶುರುವಿನಿಂದ ಸಾವಿನ ದರವನ್ನು ಕಡಿಮೆ ಮಾಡುವುದು ರಾಜ್ಯ ಸರ್ಕಾರದ ಗುರಿಯಾಗಿತ್ತು.  ಹಾಗೇ ಕೋವಿಡ್ 19 ವಾರ್ ರೂಮ್ ನೀಡಿರುವ ಮಾಹಿತಿ ಪ್ರಕಾರ, 30 ಜಿಲ್ಲೆಯಗಳ ಪೈಕಿ ಇನ್ನೂ 20 ಜಿಲ್ಲೆಗಳಲ್ಲಿ ಕೋವಿಡ್-19 ಮರಣ ಪ್ರಮಾಣ ಶೇಕಡಾ 1ಕಿಂತ ಹೆಚ್ಚಿದೆ. ಧಾರವಾಡ, ಬಳ್ಳಾರಿ, ಬೀದರ್, ಹಾವೇರಿ ಮತ್ತು ಶಿವಮೊಗ್ಗದಲ್ಲಿ ಹೆಚ್ಚಿನ ಕೊರೊನಾ ಸೋಂಕಿನ ಸಾವಿನ ಪ್ರಮಾಣ  ಹೆಚ್ಚಿದ್ದು, ಉಳಿದ ಜಿಲ್ಲೆಗಳಲ್ಲಿ ಅದು ಶೇಕಡಾ 1ಕಿಂತ ಕಡಿಮೆಯಿದೆ.

ಚಿತ್ರದುರ್ಗ, ಉಡುಪಿ, ಯಾದಗಿರಿ, ಚಿಕ್ಕಮಗಳೂರು ಮತ್ತು ರಾಯಚೂರಿನಲ್ಲಿ ಕಡಿಮೆ ಮರಣ ಪ್ರಮಾಣವಿದೆ.ಸಾವಿನ ಸಂಖ್ಯೆಯು ನಿಧಾನವಾಗಿ ಕಡಿಮೆಯಾಗಿದೆ ಆದರೆ ಹೊಸ ಕೇಸ್ ಲೋಡ್ ಕಡಿಮೆಯಾದರೆ, ಸಾವುಗಳು ಕೂಡಾ ಆಗುತ್ತಿವೆ.

ಕೋವಿಡ್ 19 ಸಾವುಗಳನ್ನು ಕಡಿಮೆ ಮಾಡುತ್ತಿದ್ದು, ರೋಗಿಗಳನ್ನು ಮೊದಲೇ ಪರೀಕ್ಷಿಸಿ ಚಿಕಿತ್ಸೆ ನೀಡುವುದರ ಹೊರತಾಗೊಇ ನಾವು ಈ ಬಗ್ಗೆ ಗಮನ ಹರಿಸಬೇಕು ಎಂದು ಡಾ. ಪ್ರದೀಪ್ ಬಾನಂದೂರು ತಿಳಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಮರಣದ ಪ್ರಮಾಣ ವಿರುವ ಜಿಲ್ಲೆಗಳಿಗೆ ಲಸಿಕೆ ಪ್ರಗತಿಯನ್ನು ಪರಿಶೀಲಿಸಬೇಕಾದ ಅಗತ್ಯವಿದೆ.  ರಾಜ್ಯದಲ್ಲಿ ಕೋವಿಡ್ 19 ಮರಣ ಪ್ರಮಾಣ ಅಂಕಿಅಂಶಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ಅನುಮಾನ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಮುಂದುವರೆದಿದ್ದು ಕಳೆದ 24 ಗಂಟೆಯಲ್ಲಿ 504 ಕೊರೊನಾ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 2,973,899ಕ್ಕೆ ಏರಿಕೆಯಾಗಿದೆ. ಕೊರೊನಾ ಸೋಂಕಿಗೆ 20 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 37,746ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.\

- Advertisement -

Latest Posts

Don't Miss