Wednesday, October 15, 2025

Latest Posts

ಪೊಲೀಸ್ ಆಗೋ ಮೊದಲು ಬ್ಲಾಕ್ ಟಿಕೆಟ್ ಮಾರುತ್ತಿದ್ದರಂತೆ ರವಿ ಚೆನ್ನಣ್ಣನವರ್..!

- Advertisement -

www.karnatakatv.net : ಬೆಂಗಳೂರು: ಡಾರ್ಲಿಂಗ್ ಕೃಷ್ಣ ಅವರ ಹೊಸ ಸಿನಿಮಾದ ಟೈಟಲ್ ಲಾಂಚ್ ಆಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದ ಪೊಲೀಸ್ ಅಧಿಕಾರಿ ರವಿಚೆನ್ನಣ್ಣನವರ್ ಮಾಧ್ಯಮದೊಂದಿಗೆ ಈ ಚಿತ್ರದ ಬಗ್ಗೆ ಮಾತನಾಡಿದ್ರು.

ನನ್ನ ಹೆಂಡತಿ ಒತ್ತಾಯದ ಮೇರೆಗೆ ನಾನು ಡಾರ್ಲಿಂಗ್ ಕೃಷ್ಣರವರ  ಲವ್ ಮಾಕ್ಟೈಲ್ ಚಿತ್ರ ನೋಡಿದೆ,. ಕೃಷ್ಣ ಹಾಗೂ  ಮಿಲನ ನಾಗರಾಜ್ ತುಂಬಾ ಅಚ್ಚುಕಟ್ಟಾಗಿ ನಟಿಸಿದ್ದಾರೆ. ನಾನು ಗೊಂಬೆ ಮನೆ ನಾಟಕ ಸಂಘದಲ್ಲಿ ನಟಿಸ್ತಿದ್ದೆ. ನಾನೇ ನಾಟಕ ರಚಿಸಿ ನಿರ್ದೇಶನದ ಜೊತೆ ನಟನೆ ಕೂಡ ಮಾಡ್ತಿದ್ದೆ. ನನ್ನ ಒಂದು ನಾಟಕ ಯೂಟ್ಯೂಬ್ ನಲ್ಲೂ ಇದೆ ಅಂತ ರವಿ ಚೆನ್ನಣ್ಣನವರ್ ಹೇಳಿದ್ರು.

ಇನ್ನು ತಮ್ಮ ನಟನಗೆ ಅವಾರ್ಡ್ ಕೂಡ ಬಂದಿತ್ತು. ಸಿನೆಮಾ ಕೂಡ ನನ್ನ ಮೇಲೆ ಪ್ರಭಾವ ಬೀರಿದೆ. ಯಾಕಂದ್ರೆ ಗದಗ್ ನಲ್ಲಿ ನಾನು ಮೊದಲು  ಬ್ಲಾಕ್ ಟಿಕೆಟ್ ಮಾರಾಟ ಮಾಡ್ತಿದ್ದೆ. ನಾನು ಕನ್ನಡದ ಅಪ್ಪಟ್ಟ ಅಭಿಮಾನಿ ಎಂದ್ರು.

ಇನ್ನು ಡಾರ್ಲಿಂಗ್ ಕೃಷ್ಣಾರವರ ಹೊಸ ಚಿತ್ರ ದಿಲ್ ಪಸಂದ್ ಚಿತ್ರಕ್ಕೆ ಶುಭವಾಗಲಿ ಅಂತ ರವಿ ಚೆನ್ನಣ್ಣನವರ್ ಹಾರೈಸಿದ್ರು.

ಫಿಲ್ಮ್ ಬ್ಯೂರೋ, ಕರ್ನಾಟಕ ಟಿವಿ – ಬೆಂಗಳೂರು

- Advertisement -

Latest Posts

Don't Miss