Friday, July 11, 2025

Latest Posts

ಈ ದಿನದ ಪ್ರಮುಖ ಸುದ್ದಿಗಳು..!

- Advertisement -

1.ಭಾರತದ ನೆರವು ಕೋರಿದ ತಾಲಿಬಾನ್

ಆಫ್ಘಾನಿಸ್ತಾನದಲ್ಲಿ ಸ್ಥಗಿತಗೊಳಿಸಲಾಗಿದ್ದ ವಿಮಾನ ಸಂಚಾರವನ್ನು ಪುನರಾರಂಭಿಸಲು ತಾಲಿಬಾನ್ ಸರ್ಕಾರ ಭಾರತವನ್ನು ಕೋರಿದೆ. ಅಫ್ಘಾನಿಸ್ತಾನ ಸರ್ಕಾರ ರಚನೆಯಾದ ಬಳಿಕ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಭಾರತದೊಂದಿಗೆ ಸಂವಹನ ನಡೆಸಿರೋ ತಾಲಿಬಾನಿಗಳು. ಅಮೆರಿಕ ಹಾಳುಗೆಡವಿ ಹೋಗಿದ್ದ ವಿಮಾನ ನಿಲ್ದಾಣವನ್ನ ಕತಾರ್ ಸರಿಪಡಿಸಿದೆ. ಹೀಗಾಗಿ ನಮ್ಮ ವಿಮಾನಯಾನ ಸಂಸ್ಥೆಗಳ ಫ್ಲೈಟ್ ಗಳು ಭಾರತಕ್ಕೆ ಹಾರಾಟ ಶುರುಮಾಡಲು ಸಿದ್ಧವಾಗಿವೆ. ಹಾಗೆಯೇ ನಿಮ್ಮ ಫ್ಲೈಟ್ ಗಳೂ ಆಫ್ಘನ್ ನೆಲದ ಮೇಲೆ ಹಾರಾಟ ಮುಂದುವರಿಸಬಹುದು ಅಂತ ಹೇಳಿದೆ.

2. ಫ್ಯೂಮಿಯೊ ಕಿಶಿದ ಜಪಾನ್ ಮುಂದಿನ ಪಿಎಂ

ಜಪಾನ್‌ನ ಮುಂದಿನ ಪ್ರಧಾನಿಯಾಗಿ ಫ್ಯೂಮಿಯೊ ಕಿಶಿದ ಆಯ್ಕೆಯಾಗಲಿದ್ದಾರೆ ಅಂತ ಹೇಳಲಾಗ್ತಿದೆ.  ಚುನಾವಣಾ ಸ್ಪರ್ಧೆಯಲ್ಲಿ ಜಪಾನ್ ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್ ಡಿಪಿ) ಮುಂಚೂಣಿಯಲ್ಲಿದ್ದು ಯೊಶಿಹಿಡೆ ಸುಗ ಪ್ರಧಾನಿ ಸ್ಥಾನದಿಂದ ಇಳಿದ ಬಳಿಕ ಕಿಶಿದ ಮುನ್ನಡೆಸಲಿದ್ದಾರೆ. ಫ್ಯೂಮಿಯೋ ಕಿಶಿದ ಅವರಿಗೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್‌ಡಿಪಿಯನ್ನು ಗೆಲುವಿನತ್ತ ಮುನ್ನಡೆಸುವುದು ಮೊದಲ ಆದ್ಯತೆಯಾಗಿದೆ. ಕಿಶಿದ ಹೆಸರು ಮಂತ್ರಿ ಸ್ಥಾನಕ್ಕೆ ಕೇಳಿಬಂದಿತ್ತು. 

3. ಚೀನಾದಲ್ಲಿ ವಿದ್ಯುತ್ ಬರ…!

ಚೀನಾದಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ವಿದ್ಯುತ್ ಘಟಕಗಳಲ್ಲಿ ಉತ್ಪಾದನೆ ಕಡಿಮೆಯಾಗಿರೋದ್ರಿಂದಾಗಿ ಇಡೀ ದೇಶ ವಿದ್ಯುತ್ ಇಲ್ಲದೆ ಪರದಾಡುತ್ತಿದೆ. ಹೀಗಾಗಿ ಚೀನಾದಾದ್ಯಂತ ಮನೆಗಳಲ್ಲಿ ಕರೆಂಟ್ ಇಲ್ಲದೆ ಜನ ಕತ್ತಲಲ್ಲಿ ಕಾಲ ಕಳೀತಿದ್ದಾರೆ. ಇನ್ನು ಕಾರ್ಖಾನೆಗಳಲ್ಲಿ ವಿದ್ಯುತ್ ಬಳಕೆ ಮಿತಿಗೊಳಿಸುವಂತೆ ಚೀನಾ ತಿಳಿಸಿದ್ದು, ಇದ್ರಿಂದ ಉತ್ಪಾದನೆ ಕುಗ್ಗಿ ಚೀನಾ ಆರ್ಥಿಕತೆ ಮೇಲೆ ಹೊಡೆತ ಬಿದ್ದು ಜಾಗತಿಕ ಪೂರೈಕೆ ಸರಣಿ ಮೇಲೆ ಪರಿಣಾಮ ಬೀರಲಿದೆ. ಕಳೆದ ಜೂನ್ ತಿಂಗಳಿನಲ್ಲೂ ಚೀನಾ ವಿದ್ಯುತ್ ಬರದಿಂದ ತೀವ್ರ ಸಮಸ್ಯೆಗೀಡಾಗಿತ್ತು. 4. ಜಲಸಮಾಧಿಯಾಗೋದಾಗಿ ಸ್ವಾಮೀಜಿ ಬೆದರಿಕೆ

ಗಾಂಧಿಜಯಂತಿಯಂದು ಭಾರತವನ್ನು ಹಿಂದೂ ರಾಷ್ಟ್ರವೆಂದು  ಘೋಷಿಸದೆ ಇದ್ದರೆ ತಾವು ಜಲಸಮಾಧಿಯಾಗೋದಾಗಿ  ಅಯೋಧ್ಯೆಯ ಜಗದ್ಗುರು ಪರಮಹಂಸ ಮಹಾರಾಜ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರೋ ಜಗದ್ಗುರು ಪರಮಹಂಸ, ಭಾರತದಲ್ಲಿರುವ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ರಾಷ್ಟ್ರೀಯತೆಯನ್ನೂ ರದ್ದುಗೊಳಿಸಬೇಕು ಅಂತ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾರೆ.

5. ಮೆಹಬೂಬಾ ಮುಫ್ತಿಗೆ ಮತ್ತೆ ಗೃಹಬಂಧನ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಭೇಟಿ ನೀಡಬೇಕೆಂದುಕೊಂಡಿದ್ದ ನನಗೆ ಮತ್ತೆ ಗೃಹ ಬಂಧನ ವಿಧಿಸಲಾಗಿದೆ ಅಂತ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಪುಲ್ವಾಮಾದ ಟ್ರಾಲ್ ಪಟ್ಟಣದಲ್ಲಿ ಕುಟುಂಬದ ಮೇಲೆ ಸೇನಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಮತ್ತು ಘಟನೆಯಲ್ಲಿ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ, ಇಂದು ಹಲ್ಲೆಗೊಳಗಾದವರನ್ನ ಭೇಟಿ ಮಾಡುವುದಾಗಿ ಮಫ್ತಿ ಹೇಳಿದ್ದರು. ಇದು ಕಾಶ್ಮೀರದ ನೈಜ ಚಿತ್ರಣವಾಗಿದ್ದು, ಕೇಂದ್ರ ಸರ್ಕಾರ ಕಣಿವೆಗೆ ರಾಜ್ಯಕ್ಕೆ ಭೇಟಿ ನೀಡೋ ಗಣ್ಯರನ್ನು ತೋರಿಸುವ ಬದಲು ಇದನ್ನು ತೋರಿಸಬೇಕು “ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.

6. ನೀಟ್ ಪರೀಕ್ಷೆ ರದ್ದತಿಗೆ ಅರ್ಜಿ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರೋ ಹಿನ್ನೆಲೆಯಲ್ಲಿ ಕಳೆದ ಸೆಪ್ಟೆಂಬರ್ 12ರಂದು ನಡೆದ ಪರೀಕ್ಷೆಯನ್ನು ರದ್ದುಗೊಳಿಸಬೇಕು ಅಂತ ನೀಟ್-ಯುಜಿ ಆಕಾಂಕ್ಷಿಗಳು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.ಹೀಗಾಗಿ ಹೊಸದಾಗಿ ಪರೀಕ್ಷೆ ನಡೆಸಲು ನಿರ್ದೇಶನ ನೀಡಿ ಹಿಂದಿನ ಪರೀಕ್ಷೆಯ ಫಲಿತಾಂಶ ಪ್ರಕಟಿಸದಂತೆ ತಡೆ ನೀಡಬೇಕು ಎಂದು ಕೋರಿದ್ದಾರೆ.

7. ಇನ್ಮುಂದೆ ಕನ್ಮಡದಲ್ಲೂ ಇಂಜಿನಿಯರಿಂಗ್ ಶಿಕ್ಷಣ

ರಾಜ್ಯದ 4 ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಸಾಲಿನಿಂದಲೇ ಕನ್ನಡದಲ್ಲಿ ಬೋಧನೆ- ಕಲಿಕೆ ಆರಂಭವಾಗಲಿದೆ ಅಂತ  ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ..

ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ (ಸಿವಿಲ್), ಚಿಕ್ಕಬಳ್ಳಾಪುರದ ಎಸ್.ಜೆ.ಸಿ. ತಾಂತ್ರಿಕ ಮಹಾವಿದ್ಯಾಲಯ, ಮೈಸೂರಿನ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ ಮತ್ತು ವಿಜಯಪುರದ ಬಿ.ಎಲ್.ಡಿ.ಇ.ಎ,  ವಿ.ಪಿ.ಡಾ.ಪಿ.ಜಿ.ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಬೋಧನೆಗೆ ತಯಾರಿ ನಡೆದಿದೆ ಅಂತ ಮಾಹಿತಿ ನೀಡಿದ್ದಾರೆ,

8. ಮಾಜಿ ಸಚಿವೆಗೆ 5 ವರ್ಷ ಜೈಲು…!

ವಿಕಲಚೇತನರಿಗಾಗಿ ಶಾಲೆ ಸ್ಥಾಪಿಸೋ ನೆಪದಲ್ಲಿ  15.45 ಲಕ್ಷ ರೂಪಾಯಿಗಳ ಸರ್ಕಾರಿ ಹಣ ದುರುಪಯೋಗ ಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮಾಜಿ ಸಚಿವೆ ಆರ್.ಇಂದಿರಾ ಕುಮಾರಿ ಮತ್ತಾಕೆಯ ಪತಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ನಿವೃತ್ತ ಅಧಿಕಾರಿ ಷಣ್ಮುಗಂ ಅವರಿಗೂ ಕೂಡ 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪಡಿಸಿಕೊಂಡಿದ್ದರು.ಸಂಸದರು/ಶಾಸಕರ ವಿರುದ್ಧದ ಪ್ರಕರಣಗಳ ವಿಶೇಷ ನ್ಯಾಯಾಲಯ ಈ ತೀರ್ಪು ವಿಧಿಸಿದೆ. ತೀರ್ಪು ಹೊರಬೀಳುತ್ತಿದ್ದಂತೆ ಇಂದಿರಾ ಕುಮಾರಿ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 1991-96ರವರೆಗೆ ಇಂದಿರಾ ಕುಮಾರಿ ಸಮಾಜ ಕಲ್ಯಾಣ ಸಚಿವರಾಗಿದ್ರು.

9. ನಾನೆಲ್ಲೂ ಹೋಗಲ್ಲವೆಂದ ಸಮಂತಾ

ನಟಿ ಸಮಂತಾ ನಾಗಚೈತನ್ಯ ದಾಂಪತ್ಯ ಜೀವನ ಅಂತ್ಯವಾಯ್ತು, ಸಮಂತಾ ಮುಂಬೈಗೆ ತೆರಳಿದ್ದಾರೆ ಎಂಬ ವದಂತಿಗೆ ಸಮಂತಾ ಪ್ರತಿಕ್ರಿಯಿಸಿದ್ದಾರೆ. ಉಡುಪು ಕಂಪನಿಯೊಂದರ ಕಾರ್ಯಕ್ರಮದ ನಿಮಿತ್ತ ಇನ್ಸ್ ಟಾಗ್ರಾಂ ನಲ್ಲಿ ಅಭಿಮಾನಿಗಳೊಂದಿಗೆ ಮಾತುಕತೆ ವೇಳೆ ಅಭಿಮಾನಿಯೊಬ್ಬರಿಗೆ ಪ್ರತಿಕ್ರಿಯಿಸಿದ ಸಮಂತಾ, ನಾನು ಮುಂಬೈಗೆ ಹೋಗಿದ್ದೀನಿ ಅನ್ನೋ ಗಾಳಿ ಸುದ್ದಿ ಎಲ್ಲಿಂದ ಹಬ್ಬಿತೋ ಗೊತ್ತಿಲ್ಲ. ನನ್ನ ಬಗ್ಗೆ ಕೇಳಿಬರ್ತಿರೋ ನೂರಾರು ಊಹಾಪೋಹಗಳಲ್ಲಿ ಇದೂ ಒಂದು. ಹೈದ್ರಾಬಾದ್ ನನ್ನ ಮನೆ. ನಾನೆಂದಿಗೂ ನನ್ನ ಮನೆಯಲ್ಲೇ ಇರುತ್ತೇನೆ. ಹೈದ್ರಾಬಾದ್  ನನಗೆ ಎಲ್ಲವನ್ನೂ ಕೊಟ್ಟಿದೆ. ಹೀಗಾಗಿ ನಾನು ಎಂದಿಗೂ ಇಲ್ಲೇ ಸಂತೋಷದಿಂದ ಇರ್ತೀನಿ ಅಂತ ಸಮಂತಾ ಹೇಳಿದ್ದಾರೆ.

10. ಇಂದು RCB-RR ಸೆಣಸಾಟ..! ಇಂದು ಐಪಿಎಲ್ ನ 43 ಪಂದ್ಯದಲ್ಲಿ ಆರ್ ಸಿಬಿ ಮತ್ತು ರಾಜಸ್ತಾನ ರಾಯಲ್ಸ್ ಎದುರಾಗಲಿವೆ. ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂ ನಲ್ಲಿ ಈ ಪಂದ್ಯ ನಡೆಯುತ್ತಿದೆ. ಇನ್ನು ಐಪಿಎಲ್ ಆರ್ ಸಿಬಿ 3ನೇ ಕ್ರಮಾಂಕದಲ್ಲಿದ್ರೆ ರಾಜಸ್ತಾನ ರಾಯಲ್ಸ್ 7ನೇ ಸ್ಥಾನದಲ್ಲಿದೆ. ಇನ್ನು ಈ ಪಂದ್ಯದಲ್ಲಿ ಆರ್ ಸಿಬಿ ಗೆದ್ದರೆ ಪ್ಲೇಆಫ್ ಕನಸು ನನಸಾಗಲಿದೆ. ಹಾಗೆಯೇ ಆರ್ ಆರ್ ತಂಡ ಗೆದ್ದರೆ ಪ್ಲೇ ಆಫ್ ಕನಸು ಜೀವಂತವಾಗಿರಲಿದೆ.

- Advertisement -

Latest Posts

Don't Miss