Thursday, October 16, 2025

Latest Posts

ಬಿಜೆಪಿ ಸರ್ಕಾರಕ್ಕೆ ಸ್ವಾಮೀಜಿ ಎಚ್ಚರಿಕೆ- 2 ದಿನ ಡೆಡ್ ಲೈನ್..!

- Advertisement -

www.karnatakatv.net : ತುಮಕೂರು : ಪಂಚಮಸಾಲಿ ಲಿಂಗಾಯಿತ ಸಮುದಾಯದ 2ಎ ಮೀಸಲಾತಿಗೆ ಸರ್ಕಾರಕ್ಕೆ ನೀಡಿದ ಗಡುವು ಸೆಪ್ಟೆಂಬರ್ 15ಕ್ಕೆ ಕೊನೆಯಾಗಿದೆ. ಇನ್ನೆರಡು ದಿನಗಳಲ್ಲಿ ಮೀಸಲಾತಿ ಘೋಷಣೆಯಾಗಿದ್ದರೆ ಮತ್ತೆ ಹೋರಾಟಕ್ಕೆ ಮಾಡ್ತೀವಿ ಅಂತ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿರೋ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತುಮಕೂರಿನ ತ್ರಿವಿಧ ದಾಸೋಹ ಕೇಂದ್ರ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದರು. ಶ್ರೀ ಮಠದ ಸಿದ್ದಲಿಂಗಸ್ವಾಮೀಜಿ ಅವರನ್ನ ಭೇಟಿಯಾಗಿ ಹೋರಾಟಕ್ಕೆ ಬೆಂಬಲ ಕೋರಿದರು. ಮೀಸಲಾತಿ ಕೊರತೆಯಿಂದ ಲಿಂಗಾಯತ ಪಂಚಮಸಾಲಿ ಮತ್ತು ಅದರ ಉಪನಾಮಗಳಾಗಿರುವ ಲಿಂಗಾಯತ ಗೌಡ, ಮಲೇಗೌಡ, ದೀಕ್ಷಾ ಲಿಂಗಾಯತ ಸಮುದಾಯದವರಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಹಿನ್ನಡೆಯಾಗಿದೆ. ಇದಕ್ಕಾಗಿ 2 ಎ ಮೀಸಲಾತಿ ಅನಿವಾರ್ಯವಾಗಿದೆ ಈಗಾಗಲೇ ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆದಿದ್ದೇವೆ.ಆದ್ರೆ ಸರ್ಕಾರ ಕೊಟ್ಟ ಮಾತು ತಪ್ಪಿದೆ. ಇನ್ನೆರಡು ದಿನಗಳಲ್ಲಿ ಸರ್ಕಾರ ಸ್ಪಂದಿಸದಿದ್ದರೆ ಅ. 1ರಿಂದ ಮತ್ತೆ ಹೋರಾಟ ನಿಚ್ಚಿತ ಅಂತ ಜಯಮೃತ್ಯುಂಜಯ ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಾವು ಯಾರ ಮೀಸಲಾತಿಯನ್ನೂ ಕಸಿದುಕೊಳ್ಳೋಕೆ ಯತ್ನಿಸ್ತಿಲ್ಲ. ಬದಲಾಗಿ ಸಂವಿಧಾನದ ಆಶಯದಂತೆ ಶೈಕ್ಷಣವಾಗಿ, ಸಾಮಾಜಿಕವಾಗಿ ಹಿಂದುಳಿದ ಜನಾಂಗದ ಮೀಸಲಾತಿ ಹೋರಾಟ ಮಾಡುತಿದ್ದೇವೆ. ಇದರಲ್ಲಿ ತಪ್ಪೆನಿದೆ ಅಂತ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಕಾಶಪ್ಪ ಪ್ರಶ್ನಿಸಿದರು.

ಒಟ್ಟಾರೆ ಪಂಚಮಸಾಲಿ ಮೀಸಲಾತಿ ಕುರಿತಾಗಿ ಮತ್ತೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಪಂಚಮಸಾಲಿ ಲಿಂಗಾಯುತ ಸಮಾಜ ಸಿದ್ಧವಾಗಿದೆ. ಇನ್ನೆರಡು ದಿನ ಸರ್ಕಾರಕ್ಕೆ ಗಡುವು ನೀಡಿರೋ ಸ್ವಾಮೀಜಿಗೆ ಸಿಎಂ ಬಸವರಾಜ ಬೊಮ್ಮಾಯಿ ಯಾವ ರೀತಿ ಪ್ರತಿಕ್ರಿಯೆ ನೀಡ್ತಾರೆ ಅನ್ನೋದನ್ನ ಕಾದುನೋಡ್ಬೇಕಿದೆ.

ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ-  ತುಮಕೂರು

- Advertisement -

Latest Posts

Don't Miss