www.karnatakatv.net :ತುಮಕೂರು: ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತಾಲಿಬಾನ್ ಪದ ಬಳಕೆ ಜಟಾಪಟಿ ಮುಂದುವರೆದಿದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅರ್ ಎಸ್ ಎಸ್ ನ್ನು ತಾಲಿಬಾನ್ ಗೆ ಹೋಲಿಕೆ ಮಾಡಿರೋದು ಕಮಲ ಪಾಳಯದ ಕಣ್ಣು ಕೆಂಪಗಾಗಿಸಿದೆ. ತುಮಕೂರಿನಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಸಿದ್ದು ವಿರುದ್ದ ಏಕವಚನದಲ್ಲೇ ಹರಿಹಾಯ್ದಿದ್ದಾರೆ.
ತುಮಕೂರಿನ ಬಿಜೆಪಿ ಮಾಜಿ ಸಚಿವ ಸೊಗಡು ಶಿವಣ್ಣ ಪತ್ರಿಕಾಗೊಷ್ಠಿ ನಡೆಸಿ, ಅರ್ ಎಸ್ ಎಸ್ ಕುರಿತು ನಿರಂತವಾಗಿ ಹೇಳಿಕೆ ಕೊಡುತ್ತಿರುವ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಕೆಂಡಾ ಮಂಡಲರಾಗಿದ್ದಾರೆ. ಆರ್ ಎಸ್ ಎಸ್ ಬಗ್ಗೆ ಸಿದ್ಧರಾಮಯ್ಯನಂತಹ ಮೀರ್ ಸಾದಿಕ್ ನಂತವರಿಗೆ ಗೊತ್ತಾಗಬೇಕು. ಸ್ವಾತಂತ್ರ್ಯ ಸಮಯದಲ್ಲಿ ಆರ್ ಎಸ್ ಎಸ್ ನವರೂ ಜೈಲಿಗೆ ಹೋಗಿದ್ರು. ಸ್ವತಂತ್ರ ಬಂದು ಮೂರು ತಿಂಗಳಲ್ಲಿ ಕಾಶ್ಮೀರದಲ್ಲಿ ಪಾಕಿಸ್ತಾನದವರು ನಮ್ಮದು ಎಂದ್ರು. ರಾಜಾಹರಿಸಿಂಗ್ ಇನ್ನೂ ಬಿಟ್ಟುಕೊಟ್ಟಿರಲಿಲ್ಲ ಆ ಸಮಯದಲ್ಲಿ ಸ್ವಯಂ ಸೇವಕರು ಅಲ್ಲಿಗೆ ಹೋಗಿದ್ರು. ಚೈನಾ ವಾರ್ ನಲ್ಲಿ ಸ್ವಯಂ ಸೇವಕರು ಹೋಗಿ ಕೆಲಸ ಮಾಡಿದ್ದಾರೆ. ದೇಶಕ್ಕೆ ಆಪತ್ತು ಬಂದಾಗ ಜೊತೆಯಾಗಿ ಆರ್ ಎಸ್ ಎಸ್ ನವರು ಕೆಲಸ ಮಾಡಿದ್ದಾರೆ. ಮೀರ್ ಸಾಧಿಕ್ ಸಿದ್ಧರಾಮಯ್ಯಗೆ ಮಾನ ಮರ್ಯಾದೆ ಇದ್ದಿದ್ರೆ ಈ ರೀತಿ ಮಾತನಾಡ್ತಿರಲಿಲ್ಲ ಅಂತಾ ಗುಡುಗಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಸೊಗಡು ಶಿವಣ್ಣ ದೇಶ ವಿಭಜನೆ ಇನ್ನು ಎಷ್ಟು ದಿನ ಮಾಡ್ತೀರಾ. ಮಾನ ಮರ್ಯಾದೆ ಇದ್ರೆ ಬಾಯಿ ಹಮ್ಮಿಕೊಂಡು ಇರಬೇಕು. ಅಲ್ಲದೆ ಕೂಡಲೇ ಕ್ಷಮೆ ಯಾಚಿಸಬೇಕು ಅಂತಾ ಆಗ್ರಹಿಸಿದರು. ಜೆಡಿಎಸ್ ನಲ್ಲಿ ಸಿದ್ಧರಾಮಯ್ಯ ಇದ್ದಾಗ ಕಾಂಗ್ರೆಸ್ ನಾಯಕರ ವಿರುದ್ಧ ವಾಚಾಮ ಗೋಚರವಾಗಿ ಬೈದು ಕೊಂಡು ಓಡಾಡಿದ ಅವರು ಎಲ್ಲರನ್ನೂ ಜೈಲಿಗೆ ಹಾಕ್ತೀನಿ ಅಂತಾ ಹೇಳೀಲ್ವಾ ಪಕ್ಷದಿಂದ ಪಕ್ಷಕ್ಕೆ ಜಿಗಿದು ಜಂಗ್ಲಿಯಂತಾಗಿರೋ ಸಿದ್ದುಗೆ ದೇಶ ಭಕ್ತರ ಬಗ್ಗೆ ಮಾತನಾಡುವ ನೈತಿಕೆ ಇಲ್ಲ ಎಂದಿದ್ದಾರೆ.
ಪ್ರಪಂಚಾದ್ಯಂತ ತಾಲೀಬಾನ್ ವಿಚಾರ ಅವರ ಕ್ರೂರತೆಯ ಬಗ್ಗೆ ಗಂಭೀರ ಚರ್ಚೆಯಾಗುತ್ತಿದೆ. ಅದರೆ ಕರ್ನಾಟಕದಲ್ಲಿ ಎರಡು ರಾಷ್ಟ್ರೀಯ ರಾಜಕೀಯ ಪಕ್ಷಗಳ ರಾಜಕೀಯ ಟೀಕೆಯ ವಸ್ತುವಾಗಿರೋದು ದುರಂತ. ಇನ್ನಾದ್ರೂ ಎರಡು ಪಕ್ಷಗಳ ಮುಖಂಡರು ಅಭೀವೃದ್ದಿ ಪರ ಕೆಲಸ ಮಾಡಬೇಕಿದೆ.
ದರ್ಶನ್ ಕೆ.ಡಿ.ಆರ್, ಕರ್ನಾಟಕ ಟಿವಿ – ತುಮಕೂರು